ಉಗ್ರರು ನುಸುಳಿರುವ ಶಂಕೆ: ಗುಜರಾತ್ ನಲ್ಲಿ 8 ಶಂಕಿತ ಉಗ್ರರ ಬಂಧನ

ಪಾಕಿಸ್ತಾನ ಮೂಲದ 10 ಮಂದಿ ಉಗ್ರರು ಭಾರತಕ್ಕೆ ನುಸುಳಿದ್ದು, ಗುಜರಾತ್ ರಾಜ್ಯದ ಮೇಲೆ ಸಂಚು ರೂಪಿಸಿದ್ದಾರೆ ಎಂಬ ಪಾಕಿಸ್ತಾನ ಅಧಿಕಾರಿಗಳ ಮಾಹಿತಿ ಹಿನ್ನೆಲೆಯಲ್ಲಿ ಇದೀಗ ಗುಜರಾತ್ ಪೊಲೀಸರು 8 ಶಂಕಿತ ಉಗ್ರರನ್ನು ಬಂಧನಕ್ಕೊಳಪಡಿಸಿದ್ದಾರೆಂದು ಮಂಗಳವಾರ ತಿಳಿಬಂದಿದೆ...
ಉಗ್ರರು ನುಸುಳಿರುವ ಶಂಕೆ: ಗುಜರಾತ್ ನಲ್ಲಿ 8 ಉಗ್ರರ ಬಂಧನ  (ಸಾಂದರ್ಭಿಕ  ಚಿತ್ರ)
ಉಗ್ರರು ನುಸುಳಿರುವ ಶಂಕೆ: ಗುಜರಾತ್ ನಲ್ಲಿ 8 ಉಗ್ರರ ಬಂಧನ (ಸಾಂದರ್ಭಿಕ ಚಿತ್ರ)
Updated on: 

ನವದೆಹಲಿ: ಪಾಕಿಸ್ತಾನ ಮೂಲದ 10 ಮಂದಿ ಉಗ್ರರು ಭಾರತಕ್ಕೆ ನುಸುಳಿದ್ದು, ಗುಜರಾತ್ ರಾಜ್ಯದ ಮೇಲೆ ಸಂಚು ರೂಪಿಸಿದ್ದಾರೆ ಎಂಬ ಪಾಕಿಸ್ತಾನ ಅಧಿಕಾರಿಗಳ ಮಾಹಿತಿ ಹಿನ್ನೆಲೆಯಲ್ಲಿ ಇದೀಗ ಗುಜರಾತ್ ಪೊಲೀಸರು 8 ಶಂಕಿತ ಉಗ್ರರನ್ನು ಬಂಧನಕ್ಕೊಳಪಡಿಸಿದ್ದಾರೆಂದು ಮಂಗಳವಾರ ತಿಳಿಬಂದಿದೆ.

ಭಾರತದ ಸಾಂಸ್ಕೃತಿಕ ಹಬ್ಬವಾಗಿರುವ ಶಿವರಾತ್ರಿಯಂದು ಗುಜರಾತ್ ಹಲವೆಡೆ ಪಾಕಿಸ್ತಾನ ಮೂಲದ ಉಗ್ರರು ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ್ದಾರೆಂದು ಭಾನುವಾರ ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ನಾಸಿರ್ ಖಾನ್ ಜಂಜುವಾ ಅವರು ಭಾರತಕ್ಕೆ ಮಾಹಿತಿ ನೀಡಿದ್ದರು. ಇದರಂತೆ ಗುಜರಾತ್ ಸೇರಿದಂತೆ ಹಲವು ರಾಜ್ಯಗಳಿಗೆ ಹೈ ಅಲರ್ಟ್ ಘೋಷಿಸಲಾಗಿತ್ತು. ಉಗ್ರರನ್ನು ಹಿಡಿಯಲು ಅಧಿಕಾರಿಗಳು ಕಾರ್ಯಾಚರಣೆಗಿಳಿದಿದ್ದರು.

ಈ ಕುರಿತಂತೆ ಎಚ್ಚರಿಕೆ ವಹಿಸಿರುವ ಜನರು ಸಂಶಯಾಸ್ಪದ ವ್ಯಕ್ತಿಗಳು ಕಾಣಿಸಿಕೊಳ್ಳುತ್ತಿರುವುದಾಗಿ ಸಿಲ್ ವಾಸಾ ಸಮೀಪದ ನರೋಲಿ ಗ್ರಾಮದ ಜನ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇದರಂತೆ ನರೋಲಿಗೆ ಅಧಿಕಾರಿಗಳು ಭೇಟಿ ನೀಡಿ 8 ಶಂಕಿತ ಉಗ್ರರನ್ನು ಬಂಧಿಸಿದ್ದಾರೆಂದು ತಿಳಿದುಬಂದಿದೆ. ಇದೀಗ ಬಂಧನಕ್ಕೊಳಗಾಗಿರುವ 8 ಶಂಕಿತ ಉಗ್ರರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com