

ಪಣಜಿ: ಮಾರ್ಚ್ 28 ರಿಂದ 31 ವರೆಗೆ ಗೋವಾದಲ್ಲಿ ನಡೆಯಲಿರುವ ಡಿಫೆನ್ಸ್ ಎಕ್ಸ್ ಪೋ ಕಾರ್ಯಕ್ರಮದಲ್ಲಿ ಭಾಗವಹಿಸಲು 46 ದೇಶಗಳ 977 ಕಂಪನಿಗಳು ನೋಂದಣಿ ಮಾಡಿಕೊಂಡಿವೆ.
ಡಿಫೆನ್ಸ್ ಎಕ್ಸ್ ಪೋ ಕಾರ್ಯಕ್ರಮ ರಕ್ಷಣಾ ಇಲಾಖೆಯನ್ನು ಸ್ಥಿರ ಬೆಳವಣಿಗೆಯ ಪಥದಲ್ಲಿ ಮುನ್ನಡೆಸುತ್ತದೆ ಎಂದು ರಕ್ಷಣಾ ಸಚಿವಾಲಯ ವಿಶ್ವಾಸ ವ್ಯಕ್ತಪಡಿಸಿದೆ. ಡಿಫ್ ಎಕ್ಸ್ ಪೋ ಇಂಡಿಯಾ 2016 ಗೋವಾದ ಕ್ಯುಪೆಂ ಜಿಲ್ಲೆಯ ನಾಕ್ಯುರಿ- ಬೆತುಲ್ ಬಳಿ ನಡೆಯಲಿದೆ.
ಡಿಫ್ ಎಕ್ಸ್ ಪೋ ಇಂಡಿಯಾ-2016 ಸ್ಥಿರ ಬೆಳವಣಿಗೆಯ ಪಥದಲ್ಲಿ ಮುನ್ನಡೆಸುವ ಕಾರ್ಯಕ್ರಮವಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಗಾಧ ಮತ್ತು ಅಭೂತಪೂರ್ವ ಅಂತರರಾಷ್ಟ್ರೀಯ ಪ್ರತಿಕ್ರಿಯೆಯನ್ನು ಗಳಿಸಿದೆ ಎಂದು ಎಕ್ಸ್ ಪೋಗಾಗಿ ತಯಾರಿಸಲಾಗಿರುವ ರಕ್ಷಣಾ ಇಲಾಖೆಯ ವೆಬ್ ಸೈಟ್ ತಿಳಿಸಿದೆ. ದೆಹಲಿಯಲ್ಲಿ ನಡೆಯುತ್ತಿದ್ದ ಎಕ್ಸ್ ಪೋ ಇದೇ ಮೊದಲ ಬಾರಿಗೆ ಗೋವಾದಲ್ಲಿ ನಡೆಯಲಿದ್ದು, ಅಮೆರಿಕ, ರಷ್ಯಾ, ಸ್ವೀಡನ್, ರಿಪಬ್ಲಿಕ್ ಆಫ್ ಕೊರಿಯಾ, ಸ್ವಿಜರ್ಲ್ಯಾಂಡ್, ಯುಎಇ ಹಾಗೂ ಪೋರ್ಚುಗಲ್ ರಾಷ್ಟ್ರಗಳು ಎಕ್ಸ್ ಪೋದಲ್ಲಿ ಭಾಗವಹಿಸಲಿವೆ.