ಪಠಾಣ್ ಕೋಟ್ ದಾಳಿ: ನಾಲ್ವರು ಉಗ್ರರ ಭಾವಚಿತ್ರ ಬಿಡುಗಡೆ

ಪಠಾಣ್ ಕೋಟ್ ದಾಳಿ ವೇಳೆ ಹತ್ಯೆಯಾದ ನಾಲ್ವರು ಉಗ್ರರ ಭಾವಚಿತ್ರವನ್ನು...
ಸಾಂಧರ್ಬಿಕ ಚಿತ್ರ
ಸಾಂಧರ್ಬಿಕ ಚಿತ್ರ
Updated on: 
ನವದೆಹಲಿ: ಪಠಾಣ್ ಕೋಟ್ ದಾಳಿ ವೇಳೆ ಹತ್ಯೆಯಾದ ನಾಲ್ವರು ಉಗ್ರರ ಭಾವಚಿತ್ರವನ್ನು ಬಿಡುಗಡೆಗೊಳಿಸಲಾಗಿದೆ, 
ರಾಷ್ಟ್ರೀಯ ತನಿಖಾ ದಳ(ಎನ್ ಐಎ) ಪಠಾಣ್ ಕೋಟ್ ದಾಳಿ ವೇಳೆ ಹತ್ಯೆಯಾದ ನಾಲ್ವರು ಉಗ್ರರ ಭಾವಚಿತ್ರವನ್ನು ಬಿಡುಗಡೆಗೊಳಿಸಿದೆ.
ಒಬ್ಬ ಉಗ್ರನ ಎರಡು ಕಾಲುಗಳಲ್ಲಿ ಒಂದೊಂದು ಬೆರಳಿಲ್ಲ ಎಂದು ಎನ್ ಐಎ ಹೇಳಿದ್ದು, ಅವರ ಕುರಿತು ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಅಷ್ಟೇ ಅಲ್ಲದೇ, ಸಮರ್ಪಕ ಮಾಹಿತಿ ನೀಡಿದವರಿಗೆ ಬಹುಮಾನ ನೀಡುವುದಾಗಿ ಘೋಷಿಸಿದೆ. 
ಪಠಾಣ್ ಕೋಟ್ ದಾಳಿ ಘಟನೆ ಕುರಿತು ಮಾಹಿತಿ ಸಂಗ್ರಹಿಸಲು ಪಾಕಿಸ್ತಾನದ ವಿಶೇಷಾ ತನಿಖಾ ತಂಡ(ಎಸ್ ಐಟಿ) ಭಾರತಕ್ಕೆ ಭೇಟಿ ನೀಡುವ ಕೆಲವೇ ದಿನಗಳಿರಬೇಕಾದರೆ, ಎನ್ ಐಎ ಉಗ್ರರ ಭಾವಚಿತ್ರಗಳನ್ನು ಬಿಡುಗಡೆ ಮಾಡಿದೆ.
ಜನವರಿ 2 ರಂದು ಪಠಾಣ್ ಕೋಟ್ ವಾಯುನೆಲೆ ದಾಳಿ ಮಾಡಿದ್ದ ಉಗ್ರರು, 7 ಯೋಧರನ್ನು ಬಲಿ ತೆಗೆದುಕೊಂಡಿದ್ದರು. ದಾಳಿ ಕುರಿತಂತೆ ತನಿಖೆ ನಡೆಸಿದ್ದ ಭಾರತೀಯ ತನಿಖಾ ತಂಡ ದಾಳಿಯಲ್ಲಿ ಪಾಕಿಸ್ತಾನದ ಕೈವಾಡವಿರುವುದಾಗಿ ಶಂಕೆ ವ್ಯಕ್ತಪಡಿಸಿ ಉಗ್ರರು ಬಳಸಿದ್ದ ಫೋನ್ ನಂಬರ್ ಹಾಗೂ ಇನ್ನಿತರೆ ಪ್ರಮುಖ ಸಾಕ್ಷ್ಯಾಧಾರಗಳನ್ನು ಪಾಕಿಸ್ತಾನಕ್ಕೆ ನೀಡಿತ್ತು. ಇದಕ್ಕೆ ಉತ್ತರಿಸಿದ್ದ ಪಾಕಿಸ್ತಾನ ಇದು ಪಾಕಿಸ್ತಾನದ ನಂಬರ್ ಗಳಲ್ಲ, ನೋಂದಣಿಯಾಗಿರದ ನಂಬರ್ ಗಳಿವು. ದಾಳಿ ಕುರಿತಂತೆ ಮತ್ತಷ್ಟು ಸಾಕ್ಷ್ಯಾಧಾರಗಳ ಅಗತ್ಯವಿದೆ ಎಂದು ಹೇಳಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com