ದೇಶ

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಬಿಗ್ ಬಿ ಶ್ರೇಷ್ಠ ನಟ, ಕಂಗನಾ ಶ್ರೇಷ್ಠ ನಟಿ

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಬಿಗ್ ಬಿ ಶ್ರೇಷ್ಠ ನಟ, ಕಂಗನಾ ಶ್ರೇಷ್ಠ ನಟಿ
ಕಂಗನಾ ರಣಾವತ್ -ಅಮಿತಾಬ್ ಬಚ್ಚನ್
Published On :
ನವದೆಹಲಿ: 63ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದೆ. ಅತ್ಯುತ್ತಮ ನಟ ಪ್ರಶಸ್ತಿ ಅಮಿತಾಬ್ ಬಚ್ಚನ್ ಪಾಲಾಗಿದ್ದು  ಹಾಗೂ ಕಂಗನಾ ರಣಾವತ್ ಅತ್ಯುತ್ತಮ ನಟಿ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾರೆ.
ಪೀಕೂ ಚಿತ್ರದಲ್ಲಿನ ಮನೋಜ್ಞ ಅಭಿನಯಕ್ಕಾಗಿ ಅಮಿತಾಬ್ ಬಚ್ಚನ್ ಪ್ರಶಸ್ತಿ ಗಿಟ್ಟಿಸಿದ್ದು, ತನು ವೆಡ್ಸ್ ಮನು ರಿಟರ್ನ್ಸ್  ಚಿತ್ರದ ಅಭಿನಯಕ್ಕಾಗಿ ಕಂಗನಾ ಪ್ರಶಸ್ತಿ ಪಡೆದಿದ್ದಾರೆ.
ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ - ದ ಬಿಗಿನಿಂಗ್ ಚಲನ ಚಿತ್ರ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ.
ಪ್ರಶಸ್ತಿ ವಿಜೇತರ ಪಟ್ಟಿ ಇಂತಿದೆ
ಅತ್ಯುತ್ತಮ ನಿರ್ದೇಶಕ - ಸಂಜಯ್ ಲೀಲಾ ಬನ್ಸಾಲಿ ( ಭಾಜಿ ರಾವ್ ಮಸ್ತಾನಿ )
ಕಲ್ಕಿ ಕೊಚೆಲಿನ್-  ತೀರ್ಪುಗಾರರ ವಿಶೇಷ ಪ್ರಶಸ್ತಿ (ಮಾರ್ಗರಿಟಾ ವಿಥ್ ಎ ಸ್ಟ್ರಾ)
ತನ್ವಿ ಆಜ್ಮಿ  - ಅತ್ಯುತ್ತಮ ಸಹ ನಟಿ ( ಭಾಜಿರಾವ್ ಮಸ್ತಾನಿ)
ವಿಸಾರಣೈ -  ಅತ್ಯುತ್ತಮ ಚಿತ್ರ (ತಮಿಳು)
ದಮ್  ಲಗಾಕೇ ಹೈಸಾ - ಅತ್ಯುತ್ತಮ ಚಿತ್ರ (ಹಿಂದಿ)
ರೆಮೋ ಡಿಸೋಜಾ  -ಅತ್ಯುತ್ತಮ ನೃತ್ಯ ನಿರ್ದೇಶಕ (ಭಾಜಿರಾವ್ ಮಸ್ತಾನಿ)
ಭಾಜಿರಾವ್ ಮಸ್ತಾನಿ ಚಿತ್ರಕ್ಕೆ ಉತ್ತಮ ಪ್ರೊಡಕ್ಷನ್ ಡಿಸೈನ್, ಉತ್ತಮ ಛಾಯಾಗ್ರಹಣ ಕ್ಕಾಗಿರುವ ಪ್ರಶಸ್ತಿಯೂ ಲಭಿಸಿದೆ.

ಜೂಹಿ ಚತುರ್ವೇದಿ (ಪೀಕೂ) ಮತ್ತು ಹಿಮಾಂಶು ಶರ್ಮಾ (ತನು ವೆಡ್ಸ್ ಮನು ರಿಟರ್ನ್ಸ್ ) - ಉತ್ತಮ ಚಿತ್ರಕತೆ, ಸಂಭಾಷಣೆ
ವಿಶಾಲ್ ಭಾರದ್ವಾಜ್ (ತಲ್ವಾರ್ ಚಿತ್ರ)  - ಉತ್ತಮ ಅಳವಡಿತ ಚಿತ್ರಕತೆಗಾಗಿ ಪ್ರಶಸ್ತಿ

ಉತ್ತಮ ಸಂಗೀತ ನಿರ್ದೇಶಕ-  ಎಂ ಜಯಚಂದ್ರನ್ - ಎನ್ನ್ ನಿಂಡೆ ಮೊಯ್ದೀನ್ (ಮಲಯಾಳಂ)
ಉತ್ತಮ ಛಾಯಾಗ್ರಹಣ-  ಸುದೀಪ್ ಚಟರ್ಜಿ -ಭಾಜಿರಾವ್  ಮಸ್ತಾನಿ
ಉತ್ತಮ ಹಿನ್ನೆಲೆ ಗಾಯಕಿ -  ಮೊನಾಲಿ ಥಾಕೂರ್ - ಮೋಹ್ ಮೋಹ್ ಕೇ ದಾಗೇ
ಉತ್ತಮ ಸಹನಟ -  ಸಮುದ್ರಕಣಿ -  ವಿಸಾರಣೈ
ಉತ್ತಮ ವಿಷ್ಯುವಲ್ ಇಫೆಕ್ಟ್ಸ್ -      ಬಾಹುಬಲಿ - ದ ಬಿಗಿನಿಂಗ್
ಉತ್ತಮ ಸಂಕಲನಕಾರ-   ಟಿಇ ಕಿಶೋರ್  - ವಿಸಾರಣೈ

ಉತ್ತಮ ಸಂಗೀತ ನಿರ್ದೇಶನ , ಹಿನ್ನೆಲೆ ಸಂಗೀತ -   ಇಳಯರಾಜಾ - ಥಾರೈ ಥಪ್ಪಾಟೈ
ಉತ್ತಮ ವಸ್ತ್ರಾಲಂಕಾರ ಮತ್ತು ಪ್ರಸಾಧನ ಕಲಾವಿದ  - ನನಕ್ ಶಾ ಫಕೀರ್

ವಿಶೇಷ ಪ್ರಶಸ್ತಿಗಳು

ಉತ್ತಮ ಮಕ್ಕಳ ಚಲನಚಿತ್ರ  - ದುರೊಂಟೋ
ಪರಿಸರ ಸಂರಕ್ಷಣೆ ಮತ್ತು ಕಾಳಜಿಗಾಗಿರುವ ಪ್ರಶಸ್ತಿ  -   ವಲಿಯ ಚಿರಗುಳ್ಳ ಪಕ್ಷಿಗಳ್
ಉತ್ತಮ ಮನೋರಂಜನಾ ಚಿತ್ರ-  ಭಾಜಿರಾವ್ ಮಸ್ತಾನಿ
ಭಾವೈಕ್ಯತೆಗಾಗಿರುವ ನರ್ಗೀಸ್ ದತ್ ಪ್ರಶಸ್ತಿ  - ನನಕ್ ಶಾ ಫಕೀರ್

ಚೊಚ್ಚಲ ನಿರ್ದೇಶಕ್ಕಾಗಿರುವ ಇಂದಿರಾ ಗಾಂಧಿ ಪ್ರಶಸ್ತಿ-   ನೀರಜ್ ಘ್ಯಾವನ್ -  (ಮಸಾನ್)


ಸಿನಿಮಾ ಸ್ನೇಹಿ ರಾಜ್ಯ ಪ್ರಶಸ್ತಿ ಗುಜರಾತ್‌ಗೆ ಸಿಕ್ಕಿದೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.