ನವದೆಹಲಿ: ಹೆತ್ತ ಮಗಳನ್ನೇ ಹತ್ಯೆ ಮಾಡಿದ ಆರೋಪದ ಮೇಲೆ ಜೈಲು ಪಾಲಾಗಿರುವ ಮಾಧ್ಯಮ ದೊರೆ ಪೀಟರ್ ಮುಖರ್ಜಿಯ ಪತ್ನಿ ಹಾಗೂ ಯುವತಿಯರು ನಾಚುವ ರೀತಿ ಬೆಡಗು, ಭಿನ್ನಾಣದಿಂದ ಮಾಧ್ಯಮಗಳಿಗೆ ಪೋಸ್ ಕೊಡುತ್ತಿದ್ದ ಇಂದ್ರಾಣಿ ಮುಖರ್ಜಿ ಈಗ ವಯಸ್ಸಾದ ಅಜ್ಜಿಯಂತೆ ಕಾಣುತ್ತಿರುವ ಫೋಟೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ಹೌದು, ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ಇಂದ್ರಾಣಿ ಮುಖರ್ಜಿಯ ಇತ್ತೀಚಿನ ಫೋಟೋ ನೋಡಿದರೆ ಹೇಗಿದ್ದ ಇಂದ್ರಾಣಿ ಹೇಗಾಗಿ ಬಿಟ್ಟಿದ್ದಾಳೆ ಎಂದು ಶಾಕ್ ಆಗುವುದು ಗ್ಯಾರಂಟಿ.
ಪೊಲೀಸ್ ಬಂಧನದಲ್ಲಿರುವ ಇಂದ್ರಾಣಿ ಕೆಲವೇ ತಿಂಗಳಲ್ಲಿ ವೃದ್ಧೆಯಾಗಿದ್ದು, ಮುಖದ ತುಂಬ ನೆರಿಗೆ, ಹಣ್ಣು ಹಣ್ಣಾದ ಕೂದಲು. ಇವನ್ನೆಲ್ಲ ನೋಡುತ್ತಿದ್ದರೆ ಇವಳೇನಾ ಅಂದು ಮೆರೆದಾಡಿದ ಇಂದ್ರಾಣಿ ಎಂಬ ಸಂದೇಹ ಮೂಡುವುದರಲ್ಲಿ ಯಾವುದೇ ಅನುಮಾನವಿಲ್ಲ.
ಎಪ್ರಿಲ್ 24, 2012ರಲ್ಲಿ ನಡೆದ ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಇಂದ್ರಾಣಿ ಮುಖರ್ಜಿ ಹಾಗೂ ಆಕೆಯ ಪತಿ ಪೀಟರ್ ಮುಖರ್ಜಿಯನ್ನು ಬಂಧಿಸಲಾಗಿದೆ.