ಪಾಕಿಸ್ತಾನದಿಂದ 55 ಮಂದಿ ಗುಜರಾತಿ ಮೀನುಗಾರರ ಬಂಧನ

86 ಮಂದಿ ಮೀನುಗಾರರನ್ನು ಜೈಲಿನಿಂದ ಬಿಡುಗಡೆ ಮಾಡಿ ವಾರ ಕಳೆದ ಕೂಡಲೇ ಪಾಕಿಸ್ತಾನ ಸಾಗರ ಭದ್ರತಾ ಸಂಸ್ಥೆ ಮತ್ತೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಾಜ್ ಕೋಟ್: 86 ಮಂದಿ ಮೀನುಗಾರರನ್ನು ಜೈಲಿನಿಂದ ಬಿಡುಗಡೆ ಮಾಡಿ ವಾರ ಕಳೆದ ಕೂಡಲೇ ಪಾಕಿಸ್ತಾನ ಸಾಗರ ಭದ್ರತಾ ಸಂಸ್ಥೆ ಮತ್ತೆ 55 ಮಂದಿ ಗುಜರಾತಿ ಮೀನುಗಾರರನ್ನು ಬಂಧಿಸಿ ಅವರ ಬಳಿಯಿಂದ 10 ದೋಣಿಗಳನ್ನು ವಶಪಡಿಸಿಕೊಂಡಿದೆ.

ವಶಪಡಿಸಿಕೊಂಡ 10 ದೋಣಿಗಳಲ್ಲಿ 5 ದೋಣಿಗಳು ಒಕ್ಹಾದಲ್ಲಿರುವ ಮೋರಿ ಮೀನುಗಾರಿಕೆ ಘಟಕಕ್ಕೆ ಸೇರಿದ್ದಾಗಿದೆ. ಗುಜರಾತ್ ನ ಪಶ್ಚಿಮ ತೀರದ ಅರೇಬಿಯನ್ ಸಮುದ್ರದ ಅಂತಾರಾಷ್ಟ್ರೀಯ ಸಾಗರ ತೀರದಲ್ಲಿ ನಿನ್ನೆ ನಸುಕಿನ ವೇಳೆ ಮೀನುಗಾರರು ಮೀನು ಹಿಡಿಯುತ್ತಿದ್ದ ವೇಳೆ ಅವರನ್ನು ಬಂಧಿಸಲಾಯಿತು ಎಂದು ರಾಷ್ಟ್ರೀಯ ಮೀನು ಕಾರ್ಮಿಕರ ವೇದಿಕೆಯ ಕಾರ್ಯದರ್ಶಿ ಮನೀಶ್ ಲೋದರಿ ತಿಳಿಸಿದ್ದಾರೆ.

ವಶಪಡಿಸಿಕೊಳ್ಳಲಾದ ದೋಣಿಗಳು ಮಂಗ್ರೋಲ್ ಮತ್ತು ಒಕ್ಹಾ ಪ್ರಾಂತ್ಯದ್ದಾಗಿದ್ದು ಮೀನುಗಾರರು ಸೌರಾಷ್ಟ್ರ ತೀರ ಮತ್ತು ದಕ್ಷಿಣ ಗುಜರಾತ್ ನ ವಿವಿಧ ಭಾಗದವರಾಗಿದ್ದಾರೆ.
ಪಾಕಿಸ್ತಾನದ ಜೈಲಿನಲ್ಲಿ ಸುಮಾರು 350 ಮಂದಿ ಮೀನುಗಾರರು ಸೆರೆಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com