ಚೆನ್ನೈ: ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಕ್ಯಾನ್ಸರ್ ತಜ್ಞೆಯ ಶವ ಪತ್ತೆ

ಚೆನ್ನೈ : ಆಘಾತಕಾರಿ ಘಟನೆಯೊಂದು ಚೆನ್ನೈನ ಎಗ್ ಮೋರ್ ಪ್ರದೇಶದ ಗಾಂಧಿ ಇರ್ವಿನ್ ರಸ್ತೆಯಲ್ಲಿ ನಡೆದಿದ್ದು, 67ರ ಹರೆಯದ ನಗರದ ಪ್ರಖ್ಯಾತ ಕ್ಯಾನ್ಸರ್ ಚಿಕಿತ್ಸಾ ತಜ್ಞೆ ರೋಹಿಣಿ ಪ್ರೇಮಕುಮಾರಿ ಅವರ ಮೃತ ದೇಹ ಪತ್ತೆಯಾಗಿದೆ. ಅವರ ಮನೆಮುಂದೆ ಗಾರ್ಡನ್ ನಲ್ಲಿ ಈ ಕೃತ್ಯ ನಡೆದಿದ್ದು, ಕೈಕಾಲು ಹಗ್ಗದಿಂದ ಬಿಗಿಯಲ್ಟಟ್ಟು ಬಾಯಿಗೆ ಮೆಡಿಕಲ್ ಟೇಪ್ ಅಂಟಿಸಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಆಕೆಯ ತಲೆಗೆ ದೊಡ್ಡ ವಸ್ತುವಿನಿಂದ ಬಲವಾಗಿ ಹೊಡೆದು ಕೊಂದುಹಾಕಿರಬಹುದೆಂದು ಪೊಲೀಸರು ಹೇಳಿದ್ದಾರೆ. ವಿಧವೆಯಾಗಿದ್ದ ರೋಹಿಣಿ ತನ್ನ 87 ವರ್ಷದ ತಾಯಿ ಸುಭದ್ರ ನಾಯರ್ ಜೊತೆ ವಾಸಿಸುತ್ತಿದ್ದರು. ರೋಹಿಣಿಯವರು ಮೊದಲ ಮಹಡಿಯಲ್ಲಿ ವಾಸಿಸುತ್ತಿದ್ದರೆ ಅವರ ತಾಯಿ ಕೆಳಗಿನ ಮನೆಯಲ್ಲಿ ಇರುತ್ತಿದ್ದರು. ರೋಹಿಣಿಯವರ ಮಗಳು ರೆಶ್ಮಿ ನಂದಿತಾ ನಗರದ ಬೇರೆ ಕಡೆ ವಾಸಿಸುತ್ತಿದ್ದಾರೆ.
ಮೊನ್ನೆ ಭಾನುವಾರ ಬೆಳಗ್ಗೆ 10.30ರ ಸುಮಾರಿಗೆ ಅವರ ತಾಯಿ ಸುಭದ್ರಾ ನಾಯರ್ ಎಂದಿನಂತೆ ಬೆಳಗ್ಗಿನ ಕಾಫಿ - ತಿಂಡಿಗಾಗಿ ಕಾಯುತ್ತಿದ್ದರು.ಮಗಳನ್ನು ಎಷ್ಟು ಬಾರಿ ಕರೆದರೂ ಆಕೆಯಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಅವರು ತಮ್ಮ ಸಂಬಂಧಿಯಾಗಿರುವ ಪರಮೇಶ್ವರನ್ ಎಂಬವರಿಗೆ ಫೋನ್ ಮಾಡಿದರು. ಅವರು ಬಂದಾಗ ರೋಹಿಣಿಯವರು ತಮ್ಮ ಬಂಗಲೆಯ ಗಾರ್ಡನ್ನಲ್ಲಿ ಸತ್ತು ಬಿದ್ದಿರುವುದು ಪತ್ತೆಯಾಯಿತು.
ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆ ಪ್ರಕಾರ, ಆಸ್ತಿ ವಿವಾದ ಕೊಲೆಗೆ ಕಾರಣವಾಗಿರಬಹುದು ಎಂದು ಸಂಶಯ ವ್ಯಕ್ತಪಡಿಸಲಾಗಿದೆ. ಡಾ.ರೋಹಿಣಿ ಅವರ ಸಂಬಂಧಿಕರು ಹೇಳಿರುವ ಪ್ರಕಾರ ರೋಹಿಣಿ ಅವರಿಗೆ ಕೆಲ ದಿನಗಳ ಹಿಂದೆ ಕಂಟ್ರಾಕ್ಟರ್ ಒಬ್ಬರೊಂದಿಗೆ ಜಗಳ ಉಂಟಾಗಿತ್ತು.
"ನಾವು ಈ ಕೊಲೆ ಪ್ರಕರಣವನ್ನು ಎಲ್ಲ ದೃಷ್ಟಿಕೋನಗಳಿಂದ ನೋಡುತ್ತಿದ್ದೇವೆ. ಹಂತಕರನ್ನು ಪತ್ತೆ ಹಚ್ಚಲು ವಿಶೇಷ ಕ್ರೈಮ್ ತಂಡಗಳನ್ನು ರಚಿಸಲಾಗಿದೆ' ಎಂದು ಪೊಲೀಸರು ಹೇಳಿದ್ದಾರೆ.
ಶನಿವಾರ ರಾತ್ರಿ ಗಾರ್ಡನ್ ನ ಲಾನ್ ನಲ್ಲಿ ಉರಿಸಿಟ್ಟ ದೀಪಗಳು ಹಾಗೆಯೇ ಇದ್ದವು. ಅಂದೇ ರಾತ್ರಿ ಕೊಲೆಯಾಗಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ಸ್ಥಳದಿಂದ ರಕ್ತದ ಮಾದರಿಯನ್ನು ತೆಗೆದುಕೊಂಡಿದ್ದಾರೆ. ಶವಪರೀಕ್ಷೆಗಾಗಿ ಮೃತದೇಹವನ್ನು ಕೊಂಡೊಯ್ಯಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


