ಸ್ಟಾಲಿನ್ ಸಿಎಂ ಆಗುವುದು ನನ್ನ ನಂತರವಷ್ಟೇ: ಕರುಣಾನಿಧಿ

ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ತಾವೇ ಆರನೇ ಬಾರಿಗೆ ಮುಖ್ಯಮಂತ್ರಿಯಾಗುವುದಾಗಿ ಹೇಳಿಕೊಂಡಿರುವ ಡಿಎಂಕೆ ನಾಯಕ ಕರುಣಾನಿಧಿ, ..
ಸ್ಟಾಲಿನ್ ಮತ್ತು ಕರುಣಾನಿಧಿ
ಸ್ಟಾಲಿನ್ ಮತ್ತು ಕರುಣಾನಿಧಿ
Updated on: 

ಚೆನ್ನೈ: ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ತಾವೇ ಆರನೇ ಬಾರಿಗೆ ಮುಖ್ಯಮಂತ್ರಿಯಾಗುವುದಾಗಿ ಹೇಳಿಕೊಂಡಿರುವ ಡಿಎಂಕೆ ನಾಯಕ ಕರುಣಾನಿಧಿ, ತಮ್ಮ ನಂತರ ಸ್ಟಾಲಿನ್ ಡಿಎಂಕೆ ಪಕ್ಷವನ್ನು ಮುನ್ನಡೆಸುತ್ತಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಕರುಣಾನಿಧಿ ನೇತೃತ್ವದ ಡಿಎಂಕೆ ಪಕ್ಷ ಬಹುಮತ ಗಳಿಸಿದರೆ ಅವರ ಪುತ್ರ ಸ್ಟಾಲಿನ್ ಮುಖ್ಯಮಂತ್ರಿಯಾಗುತ್ತಾರೆಂಬ ಊಹಾಪೋಹಕ್ಕೆ ಈ ಮೂಲಕ ತೆರೆ ಎಳೆಯಲಾಗಿದೆ.

ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ವೇಳೆ, ನಿಮ್ಮ ವಯಸ್ಸು ಹಾಗೂ ಆರೋಗ್ಯದ ಕಾರಣಕ್ಕೆ ಸ್ಟಾಲಿನ್ ಮುಖ್ಯಮಂತ್ರಿಯಾಗಲಿದ್ದರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು, ಸ್ಟಾಲಿನ್ ಮುಖ್ಯಮಂತ್ರಿಯಾಗುವ ಬಯಕೆ ಹೊಂದಿಲ್ಲ. ಅವರು, ನಾನು ಆರನೇ ಬಾರಿಗೆ ಸಿಎಂ ಆಗುವುದನ್ನು ನೋಡಲು ಕಾತರರಾಗಿದ್ದಾರೆ ಎಂದು ಕರುಣಾ ನಿಧಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com