ಬಾನಿಗೆ ಹಾರಲು ಸಿದ್ಧವಾಗಿರುವ ಇಸ್ರೋದ ಸ್ವದೇಶಿ ನಿರ್ಮಿತ ಅಂತರಿಕ್ಷ ನೌಕೆ

ಭಾರತೀಯ ಬಾಹ್ಯಾಕಾಶ ಕೇಂದ್ರ(ಇಸ್ರೋ) ತನ್ನ ಇತಿಹಾಸದಲ್ಲಿ ಮೊದಲ ಬಾರಿಗೆ ಮತ್ತೊಂದು ಮೈಲುಗಲ್ಲು ಸಾಧಿಸಲು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ತಿರುವನಂತಪುರ: ಭಾರತೀಯ ಬಾಹ್ಯಾಕಾಶ ಕೇಂದ್ರ(ಇಸ್ರೋ) ತನ್ನ ಇತಿಹಾಸದಲ್ಲಿ ಮೊದಲ ಬಾರಿಗೆ ಮತ್ತೊಂದು ಮೈಲುಗಲ್ಲು ಸಾಧಿಸಲು ಹೊರಟಿದೆ. ಈ ಹಿಂದೆಂದೂ ಮಾಡಿರದ ಪುನರ್ಬಳಕೆ ತಂತ್ರಜ್ಞಾನವನ್ನು ಒಳಗೊಂಡ ಆಕಾಶಯಾನವನ್ನು ಈ ತಿಂಗಳಾಂತ್ಯಕ್ಕೆ ಉಡಾಯಿಸಲಿದೆ.

ಇಸ್ರೋ ಪ್ರಪ್ರಥಮ ಬಾರಿಗೆ ಸಂಪೂರ್ಣ ಸ್ವದೇಶಿ ತಯಾರಿತ ಬಾಹ್ಯಾಕಾಶ ನೌಕೆಯನ್ನು ಉಡಾಯಿಸಲಿದೆ. ಇಂದು ಆಂಧ್ರಪ್ರದೇಶದ ಶ್ರೀ ಹರಿಕೋಟಾದಲ್ಲಿ ಉಡ್ಡಯನ ವಾಹಕಕ್ಕೆ ಅಂತಿಮ ಸ್ಪರ್ಶ ನೀಡಲಾಯಿತು.

ಈ ಉಡ್ಡಯನ ವಾಹಕದಿಂದ ಇನ್ನು ಮುಂದೆ ಇಸ್ರೋ ಬಾಹ್ಯಾಕಾಶದ ಕಕ್ಷೆಗೆ ಕಳುಹಿಸುವ ಉಪಗ್ರಹಗಳ ಉಡಾವಣಾ ವೆಚ್ಚವನ್ನು ಕಡಿಮೆ ಮಾಡಲಿರುವುದಲ್ಲದೆ ಇದನ್ನು ಮರು ಬಳಕೆ ಮಾಡಬಹುದಾಗಿದೆ. 

ಎಲ್ಲವೂ ಅಂದುಕೊಂಡಂತೆ ಆದರೆ, ಮುಂಗಾರು ಮಳೆ ಆರಂಭವಾಗುವುದೊರಳಗೆ ಬಂಗಾಳ ಕೊಲ್ಲಿ ತೀರದ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಸ್ವದೇಶಿ ನಿರ್ಮಿತ ಮರುಬಳಕೆ ಉಡಾವಣಾ ವಾಹನ - ತಾಂತ್ರಿಕ ಪ್ರದರ್ಶಕ (RLV-TD)ಯನ್ನು ಉಡಾಯಿಸಲಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com