ತ.ನಾಡು ವಿಧಾನಸಭೆ ಚುನಾವಣೆ: 1 ಗಂಟೆ ವೇಳೆಗೆ ಶೇ.42 ರಷ್ಟು ಮತದಾನ

ತೀವ್ರ ಕುತೂಹಲ ಕೆರಳಿಸಿರುವ ಮೂರು ರಾಜ್ಯಗಳ ವಿಧಾನಸಭಾ ಚುನಾವಣಾ ಮತದಾನ ಪ್ರಕ್ರಿಯೆ ಬಿರುಸಿನಿಂದ ಸಾಗಿದ್ದು, ತಮಿಳುನಾಡಿನಲ್ಲಿ 1 ಗಂಟೆಯ ವೇಳೆಗೆ ಶೇ.42ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ...
ಮತದಾನ ಮಾಡಿದ ಮತದಾರರು (ಸಂಗ್ರಹ ಚಿತ್ರ)
ಮತದಾನ ಮಾಡಿದ ಮತದಾರರು (ಸಂಗ್ರಹ ಚಿತ್ರ)
Updated on: 

ಚೆನ್ನೈ: ತೀವ್ರ ಕುತೂಹಲ ಕೆರಳಿಸಿರುವ ಮೂರು ರಾಜ್ಯಗಳ ವಿಧಾನಸಭಾ ಚುನಾವಣಾ ಮತದಾನ ಪ್ರಕ್ರಿಯೆ ಬಿರುಸಿನಿಂದ ಸಾಗಿದ್ದು, ತಮಿಳುನಾಡಿನಲ್ಲಿ 1 ಗಂಟೆಯ ವೇಳೆಗೆ ಶೇ.42ರಷ್ಟು  ಮತದಾನವಾಗಿದೆ ಎಂದು ತಿಳಿದುಬಂದಿದೆ.

ಸೋಮವಾರ ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಸರತಿ ಸಾಲಲ್ಲಿ ನಿಂತು ಮತದಾರರು ಮತದಾನ ಮಾಡುತ್ತಿದ್ದಾರೆ. ಇನ್ನು ತಮಿಳುನಾಡಿನಾದ್ಯಂತ ಬೆಳಗ್ಗೆ ಸುರಿದ  ಭಾರಿ ಮಳೆ ಮತದಾನಕ್ಕೆ ಅಡ್ಡಿ ಪಡಿಸಿತ್ತು. ಆದರೂ ಕೊಡೆ ಹಿಡಿದೇ ಮತದಾನಕ್ಕೆ ಆಗಮಿಸಿದ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದರು. ದಕ್ಷಿಣ ತಮಿಳುನಾಡು ಭಾಗಗಳಲ್ಲಿ ಇಂದು ಮಳೆ  ಸುರಿದಿದ್ದು, ಮಧುರೈ, ತಂಜಾವೂರು ಜಿಲ್ಲೆಗಳಲ್ಲಿ ಮಳೆ ಸುರಿದಿದೆ. ಮಳೆಯ ನಡುವೆಯೇ ಈ ಜಿಲ್ಲೆಗಳಲ್ಲಿ 11 ಗಂಟೆಯ ವೇಳೆಗೆ ಶೇ.9ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ  ತಿಳಿಸಿದೆ.

ಒಟ್ಟು 234 ಕ್ಷೇತ್ರಗಳ ಪೈಕಿ ಇಂದು 232 ಕ್ಷೇತ್ರಗಳಲ್ಲಿ ಮತದಾನವಾಗುತ್ತಿದ್ದು, ಸುಮಾರು 5.82 ಕೋಟಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಉಳಿದ ಎರಡು ಕ್ಷೇತ್ರಗಳಾದ  ತಂಜಾವೂರು ಮತ್ತು ಅರವಕುರಿಚ್ಚಿ ಕ್ಷೇತ್ರಗಳಿಗೆ ಮೇ 23ರಂದು ಮತದಾನ ನಡೆಯಲಿದೆ. ಈ ಕ್ಷೇತ್ರಗಳಲ್ಲಿ ಮತದಾರರಿಗೆ ವ್ಯಾಪಕವಾಗಿ ಹಣ ಹಂಚಲಾಗಿದೆ ಎಂಬ ಮಾಹಿತಿ ಮೇರೆಗೆ  ಚುನಾವಣಾ ಆಯೋಗ ಮತದಾನ ಪ್ರಕ್ರಿಯೆಯನ್ನು ಮುಂದೂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com