ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಸರತಿ ಸಾಲಲ್ಲಿ ನಿಂತು ಮತದಾರರು ಮತದಾನ ಮಾಡುತ್ತಿದ್ದಾರೆ. ಇನ್ನು ತಮಿಳುನಾಡಿನಾದ್ಯಂತ ಬೆಳಗ್ಗೆ ಸುರಿದ ಭಾರಿ ಮಳೆ ಮತದಾನಕ್ಕೆ ಅಡ್ಡಿ ಪಡಿಸಿತ್ತು. ಆದರೂ ಕೊಡೆ ಹಿಡಿದೇ ಮತದಾನಕ್ಕೆ ಆಗಮಿಸಿದ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದರು. ದಕ್ಷಿಣ ತಮಿಳುನಾಡು ಭಾಗಗಳಲ್ಲಿ ಇಂದು ಮಳೆ ಸುರಿದಿದ್ದು, ಮಧುರೈ, ತಂಜಾವೂರು ಜಿಲ್ಲೆಗಳಲ್ಲಿ ಮಳೆ ಸುರಿದಿದೆ. ಮಳೆಯ ನಡುವೆಯೇ ಈ ಜಿಲ್ಲೆಗಳಲ್ಲಿ 11 ಗಂಟೆಯ ವೇಳೆಗೆ ಶೇ.9ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.