ದೆಹಲಿ: ಭಾರತೀಯ ಜನತಾಪಕ್ಷಕ್ಕೆ ಮೇ 19 ಶುಭದಿನವಾಗಿತ್ತು. ದೆಹಲಿ ಮತ್ತು ಬಿಹಾರ್‌ನಲ್ಲಿ ಪರಾಭವ ಅನುಭವಿಸಿದ ನಂತರ ಬಿಜೆಪಿ ಅಸ್ಸಾಂನಲ್ಲಿ ದಾಖಲೆ ಸೃಷ್ಟಿಸಿ ಗದ್ದುಗೆಗೇರಿದೆ. ಇತ್ತ ಕೇರಳದಲ್ಲಿ ಒ ರಾಜಗೋಪಾಲ್ ಅವರ ಗೆಲುವಿನ ಮೂಲಕ ಖಾತೆ ತೆರೆದು ಕೊಂಡಿದ್ದು ಇನ್ನೊಂದು ಸಾಧನೆ.
ಅದೇ ವೇಳೆ ಕಾಂಗ್ರೆಸ್ ಅಸ್ಸಾಂ ಮತ್ತು ಕೇರಳದಲ್ಲಿ ಮುಗ್ಗರಿಸಿ ಬಿದ್ದಿದೆ.
ಇದೀಗ ಅಸ್ಸಾಂ, ಚತ್ತೀಸ್‌ಗಢ, ಗೋವಾ, ಗುಜರಾತ್, ಹರ್ಯಾಣ, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ರಾಜಸ್ಥಾನ ಹೀಗೆ 9 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ.
ಬಿಜೆಪಿಯ ಪ್ರಾಬಲ್ಯ ಹೇಗಿದೆ ಎಂಬುದಕ್ಕೆ ಇಲ್ಲಿದೆ ಅಂಕಿ ಅಂಶ (ಆಧಾರ ಟೈಮ್ಸ್ ಆಫ್ ಇಂಡಿಯಾ)
ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿನ ಜನಸಂಖ್ಯೆ - ಶೇ. 35.57
ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿನ ಜನಸಂಖ್ಯೆ- ಶೇ. 7.01
ಬಿಜೆಪಿ ಅಧಿಕಾರದಲ್ಲಿರುವ ಪ್ರದೇಶಗಳು- ಶೇ.45.46
ಕಾಂಗ್ರೆಸ್ ಅಧಿಕಾರದಲ್ಲಿರುವ ಪ್ರದೇಶಗಳು -ಶೇ. 11.15
ಬಿಜೆಪಿ ಗೆಲುವಿನಿಂದ ಖುಷಿಯಾಗಿರುವ ಪ್ರಧಾನಿ ಮೋದಿ, ಈ ಗೆಲುವಿಗೆ ಕಾರಣರಾದ ಎಲ್ಲ ಕಾರ್ಯಕರ್ತರಿಗೂ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
I congratulate @AmitShah, his team, the state units & all Karyakartas for their constant efforts that keeps the BJP flag flying high!