

ಮುಜಾಫರ್ ನಗರ: ಶಾಲಾ ಶುಲ್ಕ ಕಟ್ಟುವಂತೆ ಹೇಳಿದ ಶಿಕ್ಷಕಿಗೆ ವಿದ್ಯಾರ್ಥಿಯೊಬ್ಬನ ತಂದೆ ಥಳಿಸಿರುವ ಘಟನೆ ಹೈಬಾಪುರ್ ಹಳ್ಳಿಯ ಶಾಲೆಯೊಂದರಲ್ಲಿ ನಡೆದಿದೆ.
ಶಾಲೆ ಫೀಜು ಕಟ್ಟಲಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಯೊಬ್ಬನನ್ನು ಮಂಗಳವಾರ ಮನೆಗೆ ವಾಪಸ್ ಕಳುಹಿಸಲಾಗಿತ್ತು. ಇದರಿಂದ ಕ್ರೋಧಗೊಂಡ ವಿದ್ಯಾರ್ಥಿ ತಂದೆ ಶಾಲೆಗೆ ಬಂದು ಶಿಕ್ಷಕಿಯನ್ನು ಥಳಿಸಿದ್ದಾನೆ ಎಂದು ಚಾರ್ತವಾಲ್ ಪೊಲೀಸ್ ಠಾಣಾ ಅಧಿಕಾರಿ ಶೋಯಿಬ್ ಖಾನ್ ತಿಳಿಸಿದ್ದಾರೆ.
ಶಿಕ್ಷಕಿಗೆ ಥಳಿಸಿದ ವ್ಯಕ್ತಿ ಈಶ್ವರ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತಲೆಮರೆಸಿಕೊಂಡಿರುವ ಆತನಿಗಾಗಿ ಬಲೆ ಬೀಸಲಾಗಿದೆ ಎಂದು ಖಾನ್ ತಿಳಿಸಿದ್ದಾರೆ.