ಪ್ರಧಾನಿ ಮೋದಿ ಏಕ ಚಕ್ರಾಧಿಪತಿ ಸರ್ಕಾರ ನಡೆಸುತ್ತಿಲ್ಲ: ಪ್ರಕಾಶ್ ಜವಡೇಕರ್

ಪ್ರಧಾನಿ ನರೇಂದ್ರ ಮೋದಿಯವರು ಏಕ ಚಕ್ರಾಧಿಪತಿಯಂತೆ ಸರ್ಕಾರ ನಡೆಸುತ್ತಿದ್ದಾರೆ ಎಂಬುದು ಸತ್ಯಕ್ಕೆ ದೂರವಾದ ಸಂಗತಿಯಾಗಿದ್ದು, ಸಮಾಜದೊಂದಿಗೆ ಬೆರೆತು, ಸಮಾಜದ ಒಳಿತಿಗಾಗಿ ಎನ್‌ಡಿಎ ಸರ್ಕಾರ ಮುನ್ನಡೆಯುತ್ತಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.
ಕೇಂದ್ರ ಸಚಿವ ಪ್ರಕಾಶ್ ಜವಡೇಕರ್ (ಸಂಗ್ರಹ ಚಿತ್ರ)
ಕೇಂದ್ರ ಸಚಿವ ಪ್ರಕಾಶ್ ಜವಡೇಕರ್ (ಸಂಗ್ರಹ ಚಿತ್ರ)
Updated on: 

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಏಕ ಚಕ್ರಾಧಿಪತಿಯಂತೆ ಸರ್ಕಾರ ನಡೆಸುತ್ತಿದ್ದಾರೆ ಎಂಬುದು ಸತ್ಯಕ್ಕೆ ದೂರವಾದ ಸಂಗತಿಯಾಗಿದ್ದು, ಸಮಾಜದೊಂದಿಗೆ ಬೆರೆತು, ಸಮಾಜದ  ಒಳಿತಿಗಾಗಿ ಎನ್‌ಡಿಎ ಸರ್ಕಾರ ಮುನ್ನಡೆಯುತ್ತಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಏಕ ಚಕ್ರಾಧಿಪತಿಯಂತೆ ವರ್ತಿಸುತ್ತಿದ್ದು, ತಮ್ಮ ಮೂಗಿನ ನೇರಕ್ಕೇ ತೀರ್ಮಾನಗಳನ್ನು ಕೈಗೊಳ್ಳುತ್ತಿದ್ದಾರೆ ಎಂಬ ವಿಪಕ್ಷ ನಾಯಕರ ಟೀಕೆಯ ಹಿನ್ನಲೆಯಲ್ಲಿ ಇಂದು  ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಕಾಶ್ ಜವಡೇಕರ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಸರ್ಕಾರದ ಯಾವುದೇ ಪ್ರಮುಖ ನಿರ್ಧಾರಗಳನ್ನು ಸಂಪುಟ  ಸಹೋದ್ಯೋಗಿಗಳೊಂದಿಗೆ ಚರ್ಚಿಸಿಯೇ ಕೈಗೊಳ್ಳುತ್ತಿದ್ದಾರೆ. ಬಿಜೆಪಿ ಸಂಪುಟ ಸಭೆಯನ್ನು ಒಮ್ಮೆ ನೀವು ನೋಡಿದರೆ ನಿಮಗೇ ಅಚ್ಚರಿಯಾಗುತ್ತದೆ. ಸಂಪುಟ ಸಭೆಯಲ್ಲಿ ಹೇಗೆ ಎಲ್ಲರ  ಅಭಿಪ್ರಾಯಕ್ಕೆ ಮನ್ನಣೆ ನೀಡಲಾಗುತ್ತದೆ ಎಂಬುದು ನಿಮಗೇ ತಿಳಿಯುತ್ತದೆ ಎಂದು ಅವರು ಹೇಳಿದರು.

"ಪ್ರತಿಯೊಬ್ಬರು ತಮ್ಮ ಚಿಂತನೆಗಳು ಹಂಚಿಕೊಳ್ಳಬಹುದು. ಅವರವರ ಅಭಿಪ್ರಾಯಗಳನ್ನು ಮಂಡಿಸಬಹುದು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಂದಿಗೂ ಅದಕ್ಕೆ ಅಡ್ಡಿ ಮಾಡಿದವರಲ್ಲ.  ಅವರು ಎಲ್ಲರ ಅಭಿಪ್ರಾಯಗಳನ್ನು ಕೇಳುತ್ತಾರೆ. ತದನಂತರ ಅವರು ತಮ್ಮ ಅಭಿಪ್ರಾಯ ಹೇಳುತ್ತಾರೆ. ಧ್ರುವೀಕರಣ ನಮ್ಮ ಪಕ್ಷದ ಅಥವಾ ಸರ್ಕಾರದ ಮುಖ್ಯ ಉದ್ದೇಶವಲ್ಲ. ನಾವು ಅಖಂಡ  ಭಾರತಕ್ಕಾಗಿ ಒಂದಾಗಿದ್ದೇವೆ. ನಾವು ಒಬ್ಬ ವ್ಯಕ್ತಿಯನ್ನು ನಂಬುತ್ತೇವೆ. ಒಂದು ದೇಶವನ್ನು ಸ್ಮರಿಸುತ್ತೇವೆ. ಜನರ ಅಭಿಪ್ರಾಯವನ್ನು ಪ್ರಧಾನಿ ಮೋದಿಯವರು ಎಂದೂ ತಿರಸ್ಕರಿಸಿಲ್ಲ ಎಂದು  ಜಾವಡೇಕರ್ ತಿಳಿಸಿದರು.

ಇತ್ತೀಚೆಗಷ್ಟೆ ಮಾಜಿ ಕೇಂದ್ರ ಸಚಿವ ಅರುಣ್ ಶೌರಿ ಅವರು ಪ್ರಧಾನಿ ಮೋದಿಯವರು ನಾರ್ಸಿಸಂನಂತೆ ವರ್ತಿಸುತ್ತಿದ್ದಾರೆ. ಸರ್ವಾಧಿಕಾರಿ ಸರ್ಕಾರವನ್ನು ನಡೆಸುತ್ತಿದ್ದಾರೆ ಎಂದು  ಆರೋಪಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com