"ನಿರ್ಲಜ್ಜ ಕೇಜ್ರಿವಾಲ್ ವೈಯಕ್ತಿಕ ಲಾಭಕ್ಕಾಗಿ ಮೋದಿ ಜತೆ ಬೇಕಾದರೂ ಕೈ ಜೋಡಿಸಬಲ್ಲರು"

ಆಮ್ ಆದ್ಮಿ ಪಕ್ಷದಿಂದ ದೂರ ಉಳಿದಿರುವ ಪ್ರಶಾಂತ್ ಭೂಷಣ್ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದು, ಸಮಯ ಬಂದರೆ ಒಂದು ದಿನ ನಿರ್ಲಜ್ಜ ಅರವಿಂದ್ ಕೇಜ್ರಿವಾಲ್..
ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್ ಮತ್ತು ಅರವಿಂದ್ ಕೇಜ್ರಿವಾಲ್ (ಸಂಗ್ರಹ ಚಿತ್ರ)
ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್ ಮತ್ತು ಅರವಿಂದ್ ಕೇಜ್ರಿವಾಲ್ (ಸಂಗ್ರಹ ಚಿತ್ರ)
Updated on: 

ವಾಷಿಂಗ್ಟನ್: ಆಮ್ ಆದ್ಮಿ ಪಕ್ಷದಿಂದ ದೂರ ಉಳಿದಿರುವ ಪ್ರಶಾಂತ್ ಭೂಷಣ್ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದು, ಸಮಯ ಬಂದರೆ ಒಂದು ದಿನ  ನಿರ್ಲಜ್ಜ ಅರವಿಂದ್ ಕೇಜ್ರಿವಾಲ್ ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಪ್ರಧಾನಿ ಮೋದಿಯೊಂದಿಗೆ ಕೂಡ ಕೈ ಜೋಡಿಸಬಲ್ಲರು ಎಂದು ಹೇಳಿದ್ದಾರೆ.

ಅಮೆರಿಕ ಪ್ರವಾಸದಲ್ಲಿರುವ ಪ್ರಶಾಂತ್ ಭೂಷಣ್ ಅಲ್ಲಿಂದಲೇ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನಿಜಕ್ಕೂ ಓರ್ವ ನಿರ್ಲಜ್ಜವ್ಯಕ್ತಿ. ಸಮಯ ಬಂದರೆ  ಕೇಜ್ರಿವಾಲ್ ತಮ್ಮ ಹಿತಾಸಕ್ತಿ ಸಾಧನೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೂ ಕೈ ಜೋಡಿಸುತ್ತಾರೆ. ಇದರಲ್ಲಿ ನನಗೆ ಯಾವುದೇ ಸಂಶಯವಿಲ್ಲ ಎಂದು ಹೇಳಿದ್ದಾರೆ.

ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಸ್ವಾಯತ್ತ ರಾಜ್ಯ ದೆಹಲಿಗಾಗಿ ಮೊದಲಿನಿಂದಲೂ ಹೋರಾಟ ಮಾಡುತ್ತಿದ್ದು, ಸಾಕಷ್ಟು ವಿಚಾರಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ  ಭಿನ್ನಾಭಿಪ್ರಾಯಹೊಂದಿದೆ. ಹೀಗಿದ್ದೂ ಕೇಜ್ರಿವಾಲ್ ತಮ್ಮ ಹಿತಾಸಕ್ತಿ ಸಾಧನೆಗಾಗಿ ಪ್ರಧಾನಿ ಮೋದಿ ಅವರೊಂದಿಗೆ ಕೈ ಜೋಡಿಸಬಲ್ಲರು ಎಂದು ಕೇಜ್ರಿವಾಲ್ ಅವರ ಒಂದು ಕಾಲದ ಆಪ್ತ  ಪ್ರಶಾಂತ್ ಭೂಷಣ್ ಹೇಳಿದ್ದಾರೆ.

ಈ ಹಿಂದೆ ಸ್ವರಾಜ್ ಅಭಿಯಾನದಲ್ಲಿ ಕೇಜ್ರಿವಾಲ್ ರೊಂದಿಗೆ ಒಟ್ಟಿಗಿದ್ದ ಪ್ರಶಾಂತ್ ಭೂಷಣ್ ಆಪ್ ಪಕ್ಷ ಪ್ರಮುಖ ನಿರ್ಣಯ ಕೈಗೊಳ್ಳವು ಸಮಿತಿಯಲ್ಲಿ ಪ್ರಮುಖ ಸ್ಥಾನದಲ್ಲಿದ್ದರು. ಆದರೆ ಬಳಿಕ  ನಡೆದ ನಾಟಕೀಯ ಬೆಳವಣಿಗೆಯಲ್ಲಿ ಆಪ್ ಪಕ್ಷವನ್ನು ತೊರೆದಿದ್ದ ಪ್ರಶಾಂತ್ ಭೂಷಣ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದೀಗ ಮತ್ತೆ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿರುವ  ಪ್ರಶಾಂತ್ ಭೂಷಣ್ ಕೇಜ್ರಿವಾಲ್ ಅವರಿಗೆ ನಿಜಕ್ಕೂ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಮನಃಸ್ಥಿತಿ ಇಲ್ಲ. ಕೇಜ್ರಿವಾಲ್ ಗೆ ಒಂದು ರೀತಿಯ ಮನಮೋಹನ್ ಸಿಂಗ್ ಖಾಯಿಲೆ ಇದ್ದು, ಅವರು  ಲಂಚ ತೆಗೆದುಕೊಳ್ಳುವುದಿಲ್ಲ. ಬದಲಿಗೆ ತಮ್ಮ ಸುತ್ತಮುತ್ತಲಿರುವ ಜನರು ಲಂಚ ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತಾರೆ ಎಂದು ಪ್ರಶಾಂತ್ ಭೂಷಣ್ ಹೇಳಿದ್ದಾರೆ.

ಇದೇ ವೇಳೆ ಪಂಜಾಬ್ ವಿಧಾನಸಭೆ ಚುನಾವಣೆ ಕುರಿತು ಮಾತನಾಡಿದ ಪ್ರಶಾಂತ್ ಭೂಷಣ್ ಅವರು, ಪ್ರಸ್ತುತ ದೆಹಲಿಯಲ್ಲಿರು ಆಪ್ ಸರ್ಕಾರ ಈ ಹಿಂದಿನ ಕಾಂಗ್ರೆಸ್ ಪಕ್ಷದ ಆಡಳಿತಕ್ಕಿಂತ  ಕಳಪೆ ಆಡಳಿತ ನೀಡುತ್ತಿದೆ. ದೆಹಲಿಯ ಅಸ್ಥವ್ಯಸ್ಥ ಸರ್ಕಾರ ಪಂಜಾಬ್ ನಲ್ಲಿ ಸರ್ಕಾರ ನಡೆಸುವಷ್ಟು ವಿಶ್ವಾಸಾರ್ಹ ಪರ್ಯಾಯ ಪಕ್ಷವಲ್ಲ. ಆಪ್ ಗೆ ಹೋಲಿಕೆ ಮಾಡಿದರೆ ಪಂಜಾಬ್ ನಲ್ಲಿ  ಕಾಂಗ್ರೆಸ್ ಪಕ್ಷದ ಆಯ್ಕೆ ಉತ್ತಮ. ಆಡಳಿತ ನಿರ್ವಹಣೆಯಲ್ಲಿ ಕಾಂಗ್ರೆಸ್ ಗೆ ಆಪ್ ಪಕ್ಷಕ್ಕಿಂತಲೂ ಉತ್ತಮ ಅನುಭವವಿದೆ. ಆಪ್ ನಲ್ಲಿ ಯಾವುದೇ ಸಿದ್ಧಾಂತಗಳಾಗಲಿ ಅಜೆಂಡಾವಾಗಲಿ ಇಲ್ಲ  ಎಂದು ಪ್ರಶಾಂತ್ ಭೂಷಣ್ ಕಿಡಿಕಾರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com