

ಡೆಹ್ರಾಡೂನ್: ಖಾಸಗಿ ಬಸ್ಸೊಂದು ಆಲ್ ಮೋರಾ ಜಿಲ್ಲೆಯ ಚೂಡಿಘಟ್ಟಿ ಬಳಿ ಕಂದಕಕ್ಕೆ ಉರುಳಿದ ಪರಿಣಾಮ ಎಂಟು ಮಂದಿ ಮೃತಪಟ್ಟಿರುವ ದಾರುಣ ಘಟನೆ ಡೆಹ್ರಾಡೂನ್ ನಲ್ಲಿ ನಡೆದಿದೆ.
ಗಢವಾಲ್ ಮೋಟರ್ ಓನರ್ ಯೂನಿಯನ್ ಗೆ ಸೇರಿದ ಬಸ್ಸು ಅಲ್ ಮೋರಾ ಜಿಲ್ಲೆಯ ಮಾಸಿಯಿಂದ ನೆರೆಯ ನೈನಿತಾಲ್ ಜಿಲ್ಲೆಯ ರಾಮನಗರಕ್ಕೆ ಹೋಗುತ್ತಿದ್ದು, ಬೆಳಗ್ಗೆ 8 ಗಂಟೆ ಸುಮಾರಿಗೆ ಚಾಲನಕ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದೆ.
ದುರಂತದಲ್ಲಿ 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 20 ಮಂದಿಗೆ ಗಂಭೀರ ಗಾಯಗಳಾಗಿವೆ. ಇನ್ನು ಗಾಯಾಳುಗಳನ್ನು ಬಟ್ರೋಖಾನ್ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ರಾಣಿಖೇತ್ ನಲ್ಲಿರುವ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿಲಾಗಿದೆ ಎಂದು ಜಿಲ್ಲಾ ಪ್ರಕೋಪ ನಿರ್ವಹಣಾಧಿಕಾರಿ ರಾಕೇಶ್ ಜೋಷಿ ಹೇಳಿದ್ದಾರೆ.