ಸ್ಪೀಕರ್ ಸುಮಿತ್ರಾ ಮಹಾಜನ್ ಪ್ರಯಾಣಕ್ಕೆ ಹೊಸ ಜಾಗ್ವಾರ್ ಕಾರು

ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಇನ್ನು ಮುಂದೆ ಶ್ವೇತ ವರ್ಣದ ಜಾಗ್ವಾರ್ ಎಕ್ಸ್​ಈ ನೂತನ ಕಾರಿನಲ್ಲಿ ಸಂಚರಿಸಲಿದ್ದಾರೆ...
ಸುಮಿತ್ರಾ ಮಹಾಜನ್
ಸುಮಿತ್ರಾ ಮಹಾಜನ್

ನವದೆಹಲಿ: ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಇನ್ನು ಮುಂದೆ ಶ್ವೇತ ವರ್ಣದ ಜಾಗ್ವಾರ್ ಎಕ್ಸ್​ಈ ನೂತನ ಕಾರಿನಲ್ಲಿ ಸಂಚರಿಸಲಿದ್ದಾರೆ. 48.25 ಲಕ್ಷ ರೂಪಾಯಿ ಮೌಲ್ಯದ ಈ ಕಾರು ಸ್ಪೀಕರ್ ಗೃಹ ಕಚೇರಿ ಮುಂದೆ ನಿಂತಿದೆ.

ಎಎಂಪಿ ಮೋಟಾರ್ಸ್ ಪ್ರೈ. ಲಿಮಿಟೆಡ್ ಗೆ ಸಚಿವಾಲಯ ನಿಗದಿತ ಮೊತ್ತವನ್ನು ಮೂರು ದಿನಗಳ ಹಿಂದೆಯೇ ಬಿಡುಗಡೆ ಮಾಡಿ ನೂತನ ವಾಹನ ಖರೀದಿಸಿದೆ. ಈ ಬಗ್ಗೆ ಮಾಹಿತಿ ನೀಡಿದ ಲೋಕಸಭಾ ಸಚಿವಾಲಯದ ಮುಖ್ಯ ಕಾರ್ಯದರ್ಶಿ ಡಿ.ಕೆ.ಭಲ್ಲಾ, ಸ್ವೀಕರ್ ಸಂಚರಿಸಲು ನೂತನ ಕಾರು ಖರೀದಿಗೆ ಎರಡು ಆಯ್ಕೆಗಳಿದ್ದವು. ಬಿಎಂಡಬ್ಲ್ಯೂ-ಜಾಗ್ವಾರ್. ಇವೆರಡರ ಪೈಕಿ ಯಾವುದನ್ನು ಖರೀದಿಸಬೇಕು ಎಂಬ ಚರ್ಚೆ ಬಂದಾಗ ಭದ್ರತಾ ಪಡೆ ತಜ್ಞರು ನೀಡಿದ ಸಲಹೆ ಪ್ರಕಾರ ಬೆಲೆ ಕೊಂಚ ಕಡಿಮೆಯಾದರೂ ಬಿಎಂಡಬ್ಲ್ಯೂಗಿಂತ ಜಾಗ್ವಾರ್ ಖರೀದಿಗೆ ಸಮ್ಮತಿಸಲಾಯಿತು ಎಂದು ವಿವರಿಸಿದ್ದಾರೆ.

ಶಿಷ್ಟಾಚಾರದ ಪ್ರಕಾರ ಲೋಕಸಭಾ ಸ್ಪೀಕರ್ ಹುದ್ದೆ ಅಲಂಕರಿಸುವವರು ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗೆ ಸಮಾನರು. ರಾಷ್ಟ್ರಾಧ್ಯಕ್ಷರು, ನಂತರ ಪ್ರಧಾನಿಯಿಂದ ಆರಂಭಗೊಂಡು 5 ನೇ ಪ್ರತಿಷ್ಠಿತ ಸ್ಥಾನ ದಲ್ಲಿರುವವರು. ಹಾಗಾಗಿ ಅವರು ಸಾಧಾರಣ ವಾಹನಗಳಲ್ಲಿ ಸಂಚರಿಸಲು ಶಿಷ್ಟಾಚಾರ ಒಪ್ಪದು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com