ನವಜಾತ ಶಿಶುವಿಗೆ ಎದೆಯಾಲುಣಿಸಲು ಮುಂದಾಗದ ದಂಪತಿ ವಿರುದ್ಧ ಕೇಸ್

ಇಸ್ಲಾಂ ಧರ್ಮದ ಪ್ರಕಾರ ಐದನೇ ಅಜಾನ್ ಕರೆ ಬರುವವರೆಗೂ ಹುಟ್ಟಿದ ಮಗುವಿಗೆ ಎದೆಯಾಲುಣಿಸಬಾರದು ಎಂದು ಸೂಚಿಸಿದ್ದ ಮುಸ್ಲಿಂ ಧರ್ಮ ಪ್ರಚಾರಕನನ್ನು
ಎದೆಹಾಲು
ಎದೆಹಾಲು
ಕೋಳಿಕೋಡ್: ಇಸ್ಲಾಂ ಧರ್ಮದ ಪ್ರಕಾರ ಐದನೇ ಅಜಾನ್ ಕರೆ ಬರುವವರೆಗೂ ಹುಟ್ಟಿದ ಮಗುವಿಗೆ ಎದೆಯಾಲುಣಿಸಬಾರದು ಎಂದು ಸೂಚಿಸಿದ್ದ ಮುಸ್ಲಿಂ ಧರ್ಮ ಪ್ರಚಾರಕನನ್ನು ಪೊಲೀಸರು ಬಂಧಿಸಿದ್ದಾರೆ. 
ಕಳೆದ ಬುಧವಾರ ಮಧ್ಯಾಹ್ನ 1.30 ಸುಮಾರಿಗೆ ಮುಸ್ಲಿಂ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದು ಮಗುವಿಗೆ ಹಾಲುಣಿಸುವಂತೆ ತಾಯಿಗೆ ವೈದ್ಯರು ಹಾಗೂ ಸಿಬ್ಬಂದಿ ಸೂಚಿಸಿದರು ಮುಂದಾಗದಿದ್ದರಿಂದ ಮಗುವಿನ ತಂದೆಯನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದರು. 
ನವಜಾತ ಶಿಶುವಿನ ತಂದೆ ಅಬುಬಕ್ಕರ್ ನನ್ನು ವಿಚಾರನೆ ನಡೆಸಿದಾಗ ಆತ ಮುಸ್ಲಿಂ ಧರ್ಮ ಪ್ರಚಾರಕರೊಬ್ಬರು ಐದನೇ ಅಜಾನ್ ಕರೆ ಬರುವವರೆಗೂ ಮಗುವಿಗೆ ಹಾಲುಣಿಸದಂತೆ ಸೂಚಿಸಿದ್ದರು ಎಂದು ಹೇಳಿದ್ದಾನೆ. ಇದರಿಂದಾಗಿ ಕೇರಳ ಪೊಲೀಸರು ಪ್ರಚಾಕರ ನನ್ನು ಬಂಧಿಸಿದ್ದು, ಇಬ್ಬರು ಕೋರ್ಟ್ ಮುಂದೆ ಹಾಜರುಪಡಿಸಲಾಗುವುದು ಎಂದರು. 
ಶಿಶುವಿನ ಹಕ್ಕನ್ನು ನಿರಾಕರಿಸಿದರಿಂದ ಜುವೆನೈಲ್ ಜಸ್ಟೀಸ್ ಆಕ್ಟ್ ಪ್ರಕಾರ ದಂಪತಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com