ನೋಟು ನಿಷೇಧದ ಪರವಾಗಿದ್ದೀರೋ, ವಿರೋಧವಾಗಿದ್ದೀರೋ ಸ್ಪಷ್ಪಪಡಿಸಿ: ಕಾಂಗ್ರೆಸ್'ಗೆ ನಾಯ್ಡು

ಭ್ರಷ್ಟಾಚಾರ ಹಾಗೂ ಕಪ್ಪುಹಣದ ವಿರುದ್ಧ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಂಡಿದ್ದು, ಕೇಂದ್ರ ಸರ್ಕಾರದ ನಿರ್ಧಾರ ಪರವಾಗಿದ್ದೀರೋ ಅಥವಾ ವಿರೋಧವಾಗಿದ್ದೀರೋ ಎಂಬುದನ್ನು ಮೊದಲು ಸ್ಪಷ್ಟಪಡಿಸಿ ಎಂದು ಕಾಂಗ್ರೆಸ್ ಪಕ್ಷಕ್ಕೆ ಕೇಂದ್ರ ಸಚಿವ ವೆಂಕಯ್ಯ ನಾಯ್ಡು...
ಕೇಂದ್ರ ಸಚಿವ ವೆಂಕಯ್ಯ ನಾಯ್ಡು
ಕೇಂದ್ರ ಸಚಿವ ವೆಂಕಯ್ಯ ನಾಯ್ಡು
Updated on: 

ನವದೆಹಲಿ: ಭ್ರಷ್ಟಾಚಾರ ಹಾಗೂ ಕಪ್ಪುಹಣದ ವಿರುದ್ಧ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಂಡಿದ್ದು, ಕೇಂದ್ರ ಸರ್ಕಾರದ ನಿರ್ಧಾರ ಪರವಾಗಿದ್ದೀರೋ ಅಥವಾ ವಿರೋಧವಾಗಿದ್ದೀರೋ ಎಂಬುದನ್ನು ಮೊದಲು ಸ್ಪಷ್ಟಪಡಿಸಿ ಎಂದು ಕಾಂಗ್ರೆಸ್ ಪಕ್ಷಕ್ಕೆ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಗುರುವಾರ ಹೇಳಿದ್ದಾರೆ.

ದುಬಾರಿ ನೋಟಿನ ಮೇಲೆ ನಿಷೇಧ ಹೇರಿರುವ ಕುರಿತಂತೆ ಕಾಂಗ್ರೆಸ್ ಪಕ್ಷ ತೀವ್ರವಾಗಿ ಹೋರಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಕೇಂದ್ರ ಸರ್ಕಾರ ಕಪ್ಪು ಹಣ ಹಾಗೂ ಭಷ್ಟಾಚಾರದ ವಿರುದ್ಧ ಸಮರ ಸಾರಿ ನೋಟಿನ ಮೇಲೆ ನಿಷೇಧ ಹೇರುವ ನಿರ್ಧಾರವನ್ನು ಕೈಗೊಂಡಿದೆ. ಕೇಂದ್ರ ಈ ನಿರ್ಧಾರದ ಪರವಾಗಿ ಇದ್ದೀರೋ ಅಥವಾ ವಿರೋಧವಾಗಿದ್ದಿರೋ ಎಂಬುದನ್ನು ಕಾಂಗ್ರೆಸ್ ಪಕ್ಷ ಮೊದಲು ಸ್ಪಷ್ಟಪಡಿಸಬೇಕಿದೆ ಎಂದು ಹೇಳಿದ್ದಾರೆ.

ಸಂಸತ್ತು ಅಧಿವೇಶನದ ವೇಳೆ ಆಗ್ರಹ ಮಾಡುವುದು, ಒತ್ತಾಯಿಸುವ ಹಕ್ಕು ರಾಜಕೀಯ ಪಕ್ಷಗಳಿಗಿದೆ. ಸಂಸತ್ತಿನಲ್ಲಿ ನಡೆಯುವ ಚರ್ಚೆಗಳಿಗೆ ಅದರದ್ದೇ ಆದ ವ್ಯವಸ್ಥೆ, ನಿಯಮಗಳಿವೆ. ವ್ಯವಹಾರಿಕ ಸಲಹಾ ಸಮಿತಿ, ರಾಜ್ಯಸಭೆ, ಲೋಕಸಭೆಗೆ ಸ್ಪೀಕರ್ ಗಳಿದ್ದಾರೆ. ಯಾವುದೇ ನಿರ್ಧಾರ ಹಾಗೂ ಸಂಶಯಗಳು ವ್ಯಕ್ತವಾದರೂ ಸ್ಪೀಕರ್ ಎಲ್ಲರ ಅಭಿಪ್ರಾಯಗಳನ್ನು ಕೇಳಿ ನಿರ್ಧಾರ ಕೈಗೊಳ್ಳುತ್ತಾರೆ.

ರಾಜ್ಯಸಭೆಯಲ್ಲಿ ಈಗಾಗಲೇ ಚರ್ಚೆಗಳು ಆರಂಭವಾಗಿದೆ. ಈ ಸಂದರ್ಭದಲ್ಲಿ ನಿಯಮಗಳನ್ನು ಹೇರುವುದು ಹೇಗೆ ಸಾಧ್ಯ. ಚರ್ಚೆಯಲ್ಲಿ ವಿರೋಧ ಪಕ್ಷಗಳು ಏನು ಬೇಕಾದರೂ ಆಗ್ರಹಿಸಬಹುದು. ಆಗ್ರಹ ಮಾಡುವುದಕ್ಕೆ ಪ್ರತಿಪಕ್ಷಗಳಿಗೆ ಹಕ್ಕಿದೆ. ತನಗೆ ಸರಿ ಎನಿಸಿದನ್ನು ಹೇಳಲು ಹಾಗೂ ಪ್ರತಿಯೊಂದಕ್ಕೂ ಉತ್ತರಿಸುವ ಹಕ್ಕು ಸರ್ಕಾರಕ್ಕೂ ಇದೆ ನಾಯ್ಡು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com