ಐಎನ್ಎಸ್ ಚೆನ್ನೈ: ಏನಿದರ ವೈಶಿಷ್ಟ್ಯ?

ಐಎನ್ಎಸ್ ಚೆನ್ನೈ, ಕೊಲ್ಕತ್ತಾ ದರ್ಜೆಯ ನಿರ್ದೇಶಿತ ಕ್ಷಿಪಣಿ ನಾಶಕ 3ನೇ ಯುದ್ಧ ನೌಕೆಯಾಗಿದ್ದು...
ಐಎನ್ಎಸ್ ಚೆನ್ನೈ
ಐಎನ್ಎಸ್ ಚೆನ್ನೈ
Updated on: 
ಮುಂಬೈ: ಐಎನ್ಎಸ್ ಚೆನ್ನೈ, ಕೊಲ್ಕತ್ತಾ ದರ್ಜೆಯ ನಿರ್ದೇಶಿತ ಕ್ಷಿಪಣಿ ನಾಶಕ 3ನೇ ಯುದ್ಧ ನೌಕೆಯಾಗಿದ್ದು ಮುಂಬೈಯ ನೌಕಾ ದುರಸ್ತಿ ಪ್ರದೇಶದಲ್ಲಿ ಸೋಮವಾರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಭಾರತೀಯ ಸಮರ ನೌಕಾ ಪಡೆಗೆ ಇಂದು ಅಧಿಕೃತವಾಗಿ ಸೇರಿಸಿದರು. ಇದು ಪ್ರಾಜೆಕ್ಟ್ 15ಎ ಕೋಡ್ ಹೆಸರಿನಲ್ಲಿ ನಿರ್ಮಾಣಗೊಂಡ ಮೂರನೇ ಮತ್ತು ಕೊನೆಯ ಯುದ್ಧ ನೌಕೆಯಾಗಿದೆ. ಭಾರತದಲ್ಲಿ ಇದುವರೆಗೆ ನಿರ್ಮಿಸಲಾದ ಅತಿ ದೊಡ್ಡ ಯುದ್ಧ ನೌಕೆ ಐಎನ್ಎಸ್ ಚೆನ್ನೈ. ತಮಿಳುನಾಡಿನ ಚೆನ್ನೈ ನಗರದ ಹೆಸರನ್ನು ಇದಕ್ಕಿಡಲಾಗಿದೆ.
ಹಡಗಿನಲ್ಲಿ ಸಂಭಾವ್ಯ ಕ್ಷಿಪಣಿ ದಾಳಿಯನ್ನು ಬದಲಾಯಿಸುವ ಸಾಧನವಿದೆ. ಇದರ ಶೇಕಡಾ 60 ಭಾಗವನ್ನು ಮುಂಬೈಯ ಮಝಗಾನ್ ಡೊಕ್ ಶಿಪ್ ಬಿಲ್ಡರ್ಸ್ ಲಿಮಿಟೆಡ್ ಕಂಪೆನಿ ನಿರ್ಮಿಸಿದೆ. ಶಸ್ತ್ರಾಸ್ತ್ರ ಮತ್ತು ಸೆನ್ಸರ್ ಗಳನ್ನು ಇಸ್ರೇಲ್ ಮತ್ತು ರಷ್ಯಾದಿಂದ ತರಿಸಲಾಗಿದೆ. ಎರಡು ಯುದ್ಧ ಹೆಲಿಕಾಪ್ಟರ್ ಗಳು ನಡೆಸುವ ಕಾರ್ಯಾಚರಣೆಯಷ್ಟು ಸಾಮರ್ಥ್ಯದ ಯುದ್ಧವನ್ನು ಮಾಡುವ ರೀತಿಯಲ್ಲಿ ಹಡಗನ್ನು ವಿನ್ಯಾಸಗೊಳಿಸಲಾಗಿದೆ ಎಂದು ಪಶ್ಚಿಮ ಕಮಾಂಡ್ ನ ಮುಖ್ಯ ನೌಕಾ ಕಮಾಂಡರ್ ಗಿರೀಶ್ ಲುತ್ರಾ ತಿಳಿಸಿದ್ದಾರೆ.
2027ರ ವೇಳೆಗೆ ಸುಮಾರು 600 ವಿಮಾನ 200 ಯುದ್ಧನೌಕೆ ಶಕ್ತಿಯಷ್ಟು ಸಾಮರ್ಥ್ಯವನ್ನು ಪಡೆಯಲಿದೆ. ಸೂಪರ್ಸಾನಿಕ್ ಮೇಲ್ಮೈಯಿಂದ ಮೇಲ್ಮೈ ಬ್ರಹ್ಮೋಸ್ ಕ್ಷಿಪಣಿಗಳು ಮತ್ತು ಬರಾಕ್ -8 ದೂರವ್ಯಾಪ್ತಿಯ ಮೇಲ್ಮೈ ಯಾ ಕ್ಷಿಪಣಿಗಳನ್ನು ಹೊಂದಿರುವ ಈ ಯುದ್ಧನೌಕೆ ಸಮುದ್ರದ ಆಳದಲ್ಲಿ ಯುದ್ಧ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ ವಿರೋಧಿ ಶಸ್ತ್ರಾಸ್ತ್ರ ಮತ್ತು ಸಂವೇದಕಗಳಿದ್ದು ಟಾರ್ಪಿಡೊ ಟ್ಯೂಬ್ ರಾಕೆಟ್ ಉಡಾವಣೆ ಮತ್ತು ಸೋನಾರ್ ಸಾಮರ್ಥ್ಯವನ್ನು ಹೊಂದಿದೆ.
2010ರಲ್ಲಿ ಐಎನ್ಎಸ್ ಚೆನ್ನೈ ನೌಕೆಯ ನಿರ್ಮಾಣ ಕಾರ್ಯ ಆರಂಭಗೊಂಡಿತ್ತು. ಸ್ವದೇಶಿ ನಿರ್ಮಿತ  ಶಸ್ತ್ರಾಸ್ತ್ರಗಳು, ಸಂವೇದಕಗಳು, ರಹಸ್ಯ ವೈಶಿಷ್ಟ್ಯಗಳು, ಅತ್ಯಾಧುನಿಕ ಕಾರ್ಯ ಮಾಹಿತಿ ವ್ಯವಸ್ಥೆ, ಸಮಗ್ರ ಸಹಾಯಕ ನಿಯಂತ್ರಣ ವ್ಯವಸ್ಥೆ, ವಿಶ್ವ ದರ್ಜೆಯ ಮಾಡ್ಯುಲರ್ ನಿಲುಗಡೆ, ಅತ್ಯಾಧುನಿಕ ವಿದ್ಯುತ್ ವಿತರಣಾ ವ್ಯವಸ್ಥೆ ಮತ್ತು ಇತರ ಸುಧಾರಿತ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com