ಕೊಲವಂ ನಲ್ಲಿ ಜಪಾನಿ ಮಹಿಳೆಯ ಮೇಲೆ ಅತ್ಯಾಚಾರ

35 ವರ್ಷದ ಜಪಾನಿ ಮಹಿಳೆಯ ಮೇಲೆ 25 ವರ್ಷದ ವ್ಯಕ್ತಿ ಅತ್ಯಾಚಾರ ನಡೆಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ತಿರುವನಂತಪುರ: 35 ವರ್ಷದ ಜಪಾನಿ ಮಹಿಳೆಯ ಮೇಲೆ 25 ವರ್ಷದ ವ್ಯಕ್ತಿ ಅತ್ಯಾಚಾರ ನಡೆಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ತೇಜ ಎಂಬಾತನನ್ನು ಕರ್ನಾಟಕ ಸಮೀಪದ ಕೊವಲಂ ನಲ್ಲಿ ಪೊಲೀಸರು ಬಂಧಿಸಿದ್ದಾರೆ. ತೇಜ ಎಂಬ ವ್ಯಕ್ತಿಯ ಕುಟುಂಬ ಕೊವಲಂ ನಲ್ಲಿ ಕರಕುಶಲ ವಸ್ತುಗಳ ಅಂಗಡಿಯನ್ನಿಟ್ಟುಕೊಂಡಿದೆ. ಜಪಾನಿ ಮಹಿಳೆ ನೀಡಿರುವ ಆಧಾರದ ಮೇಲೆ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿನ್ನೆ ಕೊವಲಂ ಗೆ ಬಂದಿದ್ದ ಮಹಿಳೆ ಹೊಟೆಲ್ ನ ರೂಂ ನಲ್ಲಿ ಉಳಿದು ಕೊಂಡಿದ್ದರು. ನಿನ್ನೆ ರಾತ್ರಿ ಆರೋಪಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ, ನಂತರ ಮಹಿಳೆ ಸ್ಥಳೀಯ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com