ನಗ್ರೋಟಾ ಉಗ್ರ ದಾಳಿ: 7 ಯೋಧರು ಹುತಾತ್ಮ, 16 ಮಂದಿಯ ರಕ್ಷಣೆ

ಜಮ್ಮು-ಕಾಶ್ಮೀರದ ನಗ್ರೋಟಾ ಉಗ್ರದಾಳಿಯಲ್ಲಿ ಹುತಾತ್ಮರಾದ ಯೋಧರ ಸಂಖ್ಯೆ ಒಟ್ಟು 7ಕ್ಕೆ ಏರಿದ್ದು, ಈ ಪೈಕಿ ಇಬ್ಬರು ಸೇನಾ ಅಧಿಕಾರಿಗಳು ಹುತಾತ್ಮರಾಗಿದ್ದಾರೆ.
ನಗ್ರೋಟಾ ಉಗ್ರ ದಾಳಿ: 7 ಯೋಧರು ಹುತಾತ್ಮ, 16 ಮಂದಿಯ ರಕ್ಷಣೆ
ನಗ್ರೋಟಾ ಉಗ್ರ ದಾಳಿ: 7 ಯೋಧರು ಹುತಾತ್ಮ, 16 ಮಂದಿಯ ರಕ್ಷಣೆ
ಜಮ್ಮು: ಜಮ್ಮು-ಕಾಶ್ಮೀರದ ನಗ್ರೋಟಾ ಉಗ್ರದಾಳಿಯಲ್ಲಿ ಹುತಾತ್ಮರಾದ ಯೋಧರ ಸಂಖ್ಯೆ ಒಟ್ಟು 7ಕ್ಕೆ ಏರಿದ್ದು, ಈ ಪೈಕಿ ಇಬ್ಬರು ಸೇನಾ ಅಧಿಕಾರಿಗಳು ಹುತಾತ್ಮರಾಗಿದ್ದಾರೆ. 
ನಗ್ರೊಟಾದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸೇನೆ 3 ಉಗ್ರರನ್ನು ಹತ್ಯೆ ಮಾಡಿದ್ದರೆ, ಒತ್ತೆಯಾಳುಗಳಾಗುವಂತಹ ಸ್ಥಿತಿ ಎದುರಿಸುತ್ತಿದ್ದ ಇಬ್ಬರು ಮಕ್ಕಳು, ಇಬ್ಬರು ಮಹಿಳೆಯರು, 12 ಯೋಧರು ಸೇರಿ ಒಟ್ಟು 16 ಜನರನ್ನು ರಕ್ಷಿಸಲಾಗಿದೆ ಎಂದು ಸೇನೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 
ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಸೇನೆಯ ಉತ್ತರ ಸೇನಾಪಡೆಯ ವಿಭಾಗ ಒತ್ತೆಯಾಳು ಪರಿಸ್ಥಿತಿಗೆ ಸಿಲುಕುವ ಅಪಾಯ ಎದುರಾಗಿತ್ತು, ಈ ನಡುವೆಯೂ 16 ಜನರನ್ನು ರಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ. 
ಜಮ್ಮು ಕಾಶ್ಮೀರದಿಂದ ಸುಮಾರು 20 ಕಿಮೀ ದೂರದಲ್ಲಿರುವ ನಗ್ರೋಟಾ ಸೇನಾ ನೆಲೆಯ 166 ಫೀಲ್ಡ್ ರೆಜಿಮೆಂಟ್ ಮೇಲೆ ಸುಮಾರು 4ರಿಂದ 5 ಮಂದಿಯಿರುವ ಉಗ್ರರ ತಂಡ ಮಂಗಳವಾರ ಬೆಳಗ್ಗೆ ದಾಳಿ ನಡೆಸಲು ಪ್ರಾರಂಭಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com