ನಾಗಾಲ್ಯಾಂಡ್ ರಾಜ್ಯೋತ್ಸವ ದಿನ: ಶುಭಾಶಯ ಕೋರಿದ ಪ್ರಧಾನಿ ಮೋದಿ

ನಾಗಾಲ್ಯಾಂಡ್ ನಲ್ಲಿ 53ನೇ ರಾಜ್ಯೋತ್ಸವ ದಿನವನ್ನು ಆಚರಿಸಲಾಗುತ್ತಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರುವಾರ ಶುಭಾಶಯ ಕೋರಿದ್ದಾರೆ...
ಪ್ರಧಾನಮಂತ್ರಿ ನರೇಂದ್ರ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ

ನವದೆಹಲಿ: ನಾಗಾಲ್ಯಾಂಡ್ ನಲ್ಲಿ 53ನೇ ರಾಜ್ಯೋತ್ಸವ ದಿನವನ್ನು ಆಚರಿಸಲಾಗುತ್ತಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರುವಾರ ಶುಭಾಶಯ ಕೋರಿದ್ದಾರೆ.

ಟ್ವಿಟರ್ ನಲ್ಲಿ ಶುಭಾಶಯ ಕೋರಿರುವ ಅವರು, ಪಾಕೃತಿಕ ಸೌಂದರ್ಯ ಹಾಗೂ ಪ್ರತಿಭಾವಂತ ಜನರನ್ನು ನಾಗಾಲ್ಯಾಂಡ್ ಹೊಂದಿದ್ದು, ಪ್ರತಿಭಾವಂತರ ಜನರು ರಾಜ್ಯವನ್ನು ಉನ್ನತ ಮಟ್ಟಕ್ಕೆ ಕರೆದುಕೊಂಡು ಹೋಗಲಿದ್ದಾರೆ. ನಾಗಾಲ್ಯಾಂಡ್ ನಲ್ಲಿ ರಾಜ್ಯೋತ್ಸವ ದಿನವನ್ನು ಆಚರಿಸಲಾಗುತ್ತಿದ್ದು, ಜನತೆಗೆ ಈ ಮೂಲಕ ಶುಭಾಷಯಗಳನ್ನು ಹೇಳಲು ಇಚ್ಛಿಸುತ್ತೇನೆಂದು ಹೇಳಿದ್ದಾರೆ.

ನಾಗಾಲ್ಯಾಂಡ್ ಈಶಾನ್ಯ ಭಾರತದ ರಾಜ್ಯಗಳಲ್ಲೊಂದಾಗಿದ್ದು, ಪಶ್ಚಿಮದಲ್ಲಿ ಅಸ್ಸಾಂ, ಉತ್ತರದಲ್ಲಿ ಅರುಣಾಚಲ ಪ್ರದೇಶ, ಪೂರ್ವದಲ್ಲಿ ಮ್ಯಾನ್ಮಾರ್ ಮತ್ತು ದಕ್ಶಿಣದಲ್ಲಿ ಮಣಿಪುರದ ಜೊತೆಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. 1963ರಲ್ಲಿ ಡಿಸೆಂಬರ್ 1 ರಂದು ನಾಗಾಲ್ಯಾಂಡ್ ನ್ನು ಸ್ಥಾಪನೆ ಮಾಡಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com