

ಚಂಡೀಘಢ(ಪಂಜಾಬ್): ರಾಜ್ಯಸಭಾ ಸದಸ್ಯತ್ವ ಹಾಗೂ ಬಿಜೆಪಿಗೆ ರಾಜಿನಾಮೆ ನೀಡಿದ್ದ ಖ್ಯಾತ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ನೂತನ ಪಕ್ಷವನ್ನು ಸ್ಥಾಪಿಸಿದ್ದಾರೆ.
ರಾಜಿನಾಮೆ ನಂತರ ನವಜೋತ್ ಸಿಂಗ್ ಸಿಧು ಆಮ್ ಆದ್ಮಿ ಪಕ್ಷ ಸೇರುತ್ತಾರೆ ಎಂದು ಹೇಳಲಾಗಿತ್ತು. ಆದರೆ ಆಪ್ ನಡುವೆ ಒಮ್ಮತ ಮೂಡದಿದ್ದರಿಂದ ತಟಸ್ಥವಾಗಿ ಉಳಿದಿದ್ದ ಸಿಧು ಇದೀಗ ಆವಾಜ್ ಏ ಪಂಜಾಬ್ ಹೆಸರಿನ ನೂತನ ಪಕ್ಷವನ್ನು ಸ್ಥಾಪಿಸಿದ್ದಾರೆ.
ನವಜೋತ್ ಸಿಂಗ್ ಸಿಧು ನೂತನ ಪಕ್ಷ ಸ್ಥಾಪಿಸುತ್ತಾರೆ ಎಂದು ಸಿದ್ದು ಪತ್ನಿ ನವಜೋತ್ ಕೌರ್ ಮಾಹಿತಿ ನೀಡಿದ್ದರು.
ಪಂಜಾಬ್ ವಿಧಾನಸಭೆ ಚುನಾವಣೆ ಹಿನ್ನೆಲೆ ರಾಜಕೀಯ ಪಕ್ಷಗಳು ಗೆಲ್ಲಲು ರಣತಂತ್ರಗಳನ್ನು ರೂಪಿಸುತ್ತಿವೆ. ಇದೇ ವೇಳೆ ನವಜೋತ್ ಸಿಂಗ್ ಸಿಧು ಪಂಜಾಬ್ ನಲ್ಲಿ ನೂತನ ಪಕ್ಷವನ್ನು ಸ್ಥಾಪಿಸಿರುವುದು ಹಲವು ಕುತೂಹಲಗಳಿಗೆ ಎಡೆಮಾಡಿಕೊಟ್ಟಿದೆ.