ಒಡಿಶಾದ ರಸ್ತೆಗೆ ಮದರ್ ತೆರೇಸಾ ಹೆಸರು

ತೆರೇಸಾ ಅವರಿಗೆ ಭಾನುವಾರ ಸಂತ ಪದವಿ ಪ್ರದಾನ ಮಾಡಿದ ಬೆನ್ನಲ್ಲೇ ಒಡಿಶಾದಲ್ಲಿ ರಸ್ತೆಯೊಂದಕ್ಕೆ ಮದರ್ ತೆರೇಸಾ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ.
ಮದರ್ ತೆರೇಸಾ
ಮದರ್ ತೆರೇಸಾ
Updated on: 
ಭುವನೇಶ್ವರ್: ತೆರೇಸಾ ಅವರಿಗೆ ಭಾನುವಾರ ಸಂತ ಪದವಿ ಪ್ರದಾನ ಮಾಡಿದ ಬೆನ್ನಲ್ಲೇ ಒಡಿಶಾದಲ್ಲಿ ರಸ್ತೆಯೊಂದಕ್ಕೆ ಮದರ್ ತೆರೇಸಾ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ. 
ಚುಟ್ಟಾಕ್-ಪುರಿ ಹಾಗು ಸತ್ಯ ನಗರಕ್ಕೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆಗೆ ಮದರ್ ತೆರೇಸಾ ಅವರ ಹೆಸರನ್ನು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನಾಮಕರಣ ಮಾಡಿದ್ದಾರೆ. ಸತ್ಯನಗರ ಮೇಲ್ಸೇತುವೆಗೆ ಸೇಂಟ್ ಮದರ್ ತೆರೇಸಾ ಅವರ ಹೆಸರನ್ನು ನಾಮಕರಣ ಮಾಡಲು ಸಂತೋಷವಾಗುತ್ತಿದೆ ಎಂದು ನವೀನ್ ಪಟ್ನಾಯಕ್ ತಿಳಿಸಿದ್ದಾರೆ. 
ಮದರ್ ತೆರೇಸಾ ಅವರು ಭಾರತವನ್ನು ಬಡವರ, ದೀನ ದಲಿತರ ಸೇವೆಗಾಗಿ ತಮ್ಮ ಮನೆಯನ್ನಾಗಿಸಿಕೊಂಡರು ಎಂದು ನವೀನ್ ಪಟ್ನಾಯಕ್ ಹೇಳಿದ್ದು, ಪಟ್ನಾಯಕ್ ತೆರೇಸಾ ಅವರನ್ನು ಬಡವರ, ದೀನ ದಲಿತರ ಪಾಲಿನ ದೇವರು ಎಂದು ಬಣ್ಣಿಸಿದ್ದಾರೆ.   

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com