ಕಾಸರಗೋಡು: ಕಾಸರಗೋಡಿನ ಬದಿಯಡ್ಕದಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರು ಸಿಪಿಐ ಕಾರ್ಯಕರ್ತನಿಗೆ ಇರಿದಿರುವುದಾಗಿ ಆರೋಪಿಸಲಾಗಿದೆ. ಸಿಪಿಐನ ವಿಭಾಗೀಯ ಕಾರ್ಯದರ್ಶಿ ಸೀತಾರಾಮ(42) ಅವರ ಮೇಲೆ ದಾಳಿ ಮಾಡಿ ಹೊಟ್ಟೆಗೆ ಐದು ಬಾರಿ ಇರಿಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಅವರಿಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನಾವು ಸಂತ್ರಸ್ತನ ಹೇಳಿಕೆಯನ್ನು ತೆಗೆದುಕೊಳ್ಳಲು ಮಂಗಳೂರಿಗೆ ಹೊರಟಿದ್ದೆವು ಎಂದು ತಿಳಿಸಿರುವ ಬದಿಯಡ್ಕ ಪೊಲೀಸರು, ಅಷ್ಟರಲ್ಲಿ ಸಿಪಿಐ ಪಕ್ಷ ಇಬ್ಬರು ಬಿಜೆಪಿ ಪಕ್ಷದ ಕಾರ್ಯಕರ್ತರು ಕಾರಣ ಎಂದು ದೂರು ನೀಡಿದೆ ಎಂದು ಹೇಳಿದ್ದಾರೆ.
ಒಂದು ವಾರದಿಂದ ರಾಜಕೀಯಪೂರಿತ ದ್ವೇಷದಿಂದ ಬಡಿಯಡ್ಕ ಕುದಿಯುತ್ತಿದೆ. ಸೋಮವಾರ ಬಾಂಜತ್ತಡ್ಕನಲ್ಲಿ ಧ್ವಜ ಆರೋಹಣ ವಿವಾದ ಪ್ರಕರಣದಲ್ಲಿ ಸೀತಾರಾಮ ಅವರಿಗೆ ಇರಿಯಲಾಗಿದೆ ಎಂದು ತಿಳಿದುಬಂದಿದೆ.