ಗಂಡು ವೇಶ್ಯೆಯರ ಜತೆ ಸೆಕ್ಸ್ ಮಾಡಿ ಸಿಕ್ಕಿಬಿದ್ದ ಭಾರತ ಮೂಲದ ಬ್ರಿಟನ್ ಸಂಸದ

ಗಂಡು ವೇಶ್ಯೆಯರ ಜತೆ ಸೆಕ್ಸ್ ನಡೆಸಿದ ಆರೋಪದಲ್ಲಿ ಭಾರತೀಯ ಮೂಲದ ಬ್ರಿಟನ್ ನ ಪ್ರಭಾವಿ ಸಂಸದ ಕೀತ್ ವಾಜ್ ಸಿಲುಕಿದ್ದಾರೆ...
ಕೀತ್ ವಾಜ್
ಕೀತ್ ವಾಜ್

ಲಂಡನ್: ಗಂಡು ವೇಶ್ಯೆಯರ ಜತೆ ಸೆಕ್ಸ್ ನಡೆಸಿದ ಆರೋಪದಲ್ಲಿ ಭಾರತೀಯ ಮೂಲದ ಬ್ರಿಟನ್ ನ ಪ್ರಭಾವಿ ಸಂಸದ ಕೀತ್ ವಾಜ್ ಸಿಲುಕಿದ್ದಾರೆ.

ಗೋವಾ ಮೂಲದವರಾದ 59 ವರ್ಷದ ಕೀತ್ ವಾಜ್ 1987ರಿಂದ ಬ್ರಿಟನ್ ನ ಲೀಸ್ಟರ್ ಕ್ಷೇತ್ರ ಸಂಸದರಾಗಿದ್ದು, ಅತ್ಯಂತ ಸುದೀರ್ಘ ಅವಧಿಗೆ ಸಂಸದರಾಗಿರುವ ಭಾರತೀಯ ಮೂಲದ ವ್ಯಕ್ತಿ ಎಂಬ ಹೆಗ್ಗಳಿಕೆಯನ್ನು ಅವರು ಹೊಂದಿದ್ದಾರೆ.

ಲಂಡನ್ ನಲ್ಲಿರುವ ಫ್ಲ್ಯಾಟ್ ನಲ್ಲಿ ಕೀತ್ ವಾಜ್ ಕಳೆದ ತಿಂಗಳು ಇಬ್ಬರು ಗಂಡು ವೇಶ್ಯೆಯರ ಜತೆ ರಾಸಲೀಲೆ ನಡೆಸಿದ್ದಾರೆ. ಇದಕ್ಕಾಗಿ ಅವರಿಗೆ ಹಣ ಪಾವತಿಸಿದ್ದಾರೆ. ವಯಸ್ಸಾಗಿರುವ ಕಾರಣ ಲೈಂಗಿಕ ಶಕ್ತಿ ವೃದ್ಧಿಗೆ ನಿಷೇಧಿತ ಔಷಧ ಸೇವಿಸಿದ್ದಾರೆ. ಅಲ್ಲದೆ ತಾವು ಸುರಕ್ಷಿತ ವಲ್ಲದ ಸೆಕ್ಸ್ ನಡೆಸಿದ್ದಾಗಿ ಹೇಳಿಕೊಂಡಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಕೀತ್ ವಾಜ್ ಗಂಡು ವೇಶ್ಯೆಯರ ಜತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ವಿಡಿಯೋ ಹಾಗೂ ವಾಜ್-ಗಂಡು ವೇಶ್ಯೆಯರ ನಡುವೆ ಆದ ಅಶ್ಲೀಲ ಎಸ್ಎಂಎಸ್ ಗಳನ್ನು ಕೂಡ ಬಿಡುಗಡೆ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com