ನವಜೋತ್ ಸಿಂಗ್ ಸಿಧು ಆರ್ ಎಸ್ ಎಸ್ ನ ಬಿ ಟೀಮ್: ಆಮ್ ಆದ್ಮಿ ಪಕ್ಷ

ಆಮ್ ಆದ್ಮಿ ಪಕ್ಷ ನವಜೋತ್ ಸಿಂಗ್ ಸಿಧು ಅವರು ಆರ್ ಎಸ್ ಎಸ್ ನ ಬಿ ಟೀಮ್ ನಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದೆ.
ನವಜೋತ್ ಸಿಂಗ್ ಸಿಧು
ನವಜೋತ್ ಸಿಂಗ್ ಸಿಧು
Updated on: 

ಚಂಡೀಗಢ: ಮಾಜಿ ಸಂಸದ ನವಜೋತ್ ಸಿಂಗ್ ಸಿಧು ಅವರು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಮ್ ಆದ್ಮಿ ಪಕ್ಷ ನವಜೋತ್ ಸಿಂಗ್ ಸಿಧು ಅವರು ಆರ್ ಎಸ್ ಎಸ್ ನ ಬಿ ಟೀಮ್ ನಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದೆ.

ಪಂಜಾಬ್ ನಲ್ಲಿ ಬಿಜೆಪಿ- ಎಸ್ಎಡಿ ಮೈತ್ರಿಕೂಟ ಕಳೆದ 10 ವರ್ಷಗಳಿಂದ ಅಧಿಕಾರ ನಡೆಸುತ್ತಿದ್ದು, ಪಂಜಾಬ್ ನಲ್ಲಿ ಉಂಟಾಗಿರುವ ಸ್ಥಿತಿಗೆ ಬಿಜೆಪಿಯೂ ಕಾರಣ ಎಂಬುದು ನವಜೋತ್ ಸಿಂಗ್ ಸಿಧು ಅವರಿಗೆ ತಿಳಿದಿದೆ. ಆದ್ದರಿಂದ ಬಿಜೆಪಿ-ಎಸ್ ಎಡಿ ಮೈತ್ರಿಕೂಟವನ್ನು ರಕ್ಷಿಸಲು ನವಜೋತ್ ಸಿಂಗ್ ಸಿಧು ಅವರು ಹೊಸ ಪಕ್ಷವೊಂದನ್ನು ಸ್ಥಾಪಿಸುವ ಮೂಲಕ ಆರ್ ಎಸ್ ಎಸ್ ನ ಬಿ ಟೀಮ್ ನಂತೆ ವರ್ತಿಸುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ. 
ಇತ್ತೀಚೆಗಷ್ಟೇ ಬಿಜೆಪಿಯನ್ನು ತೊರೆದಿದ್ದ ಮಾಜಿ ಸಂಸದ ನವಜೋತ್ ಸಿಂಗ್ ಸಿಧು, ಆವಾಜ್-ಎ- ಪಂಜಾಬ್ ಎಂಬ ಹೊಸ ಪಕ್ಷವನ್ನು ಸೆ.8 ರಂದು ಅಧಿಕೃತವಾಗಿ ಅಸ್ತಿತ್ವಕ್ಕೆ ತಂದಿದ್ದರು. ಪಕ್ಷ ಸ್ಥಾಪನೆಯ ನಂತರ ಮಾತನಾಡಿದ್ದ ನವಜೋತ್ ಸಿಂಗ್, ನಾನು ಬಿಜೆಪಿ ತೊರೆದ ಬಳಿಕ ಆಮ್ ಆದ್ಮಿ ಪಕ್ಷದ ನಾಯಕ ಕೇಜ್ರಿವಾಲ್ ನನ್ನೊಂದಿಗಿನ ಭೇಟಿ ಬಗ್ಗೆ ಟ್ವೀಟ್ ಮಾಡಿದ್ದರು, ಆದರೆ ಅದರಲ್ಲಿದ್ದದ್ದು ಅರ್ಧ ಸತ್ಯ ಮಾತ್ರ. ಭೇಟಿಯ ವೇಳೆ ಅವರು ನನಗೆ ಚುನಾವಣೆಗೆ ಸ್ಪರ್ಧಿಸದಂತೆ ತಾಕೀತು ಮಾಡಿದ್ದರು. ಅಷ್ಟೇ ಅಲ್ಲದೆ ನನ್ನ ಪತ್ನಿಯನ್ನು ಚುನಾವಣಾ ಕಣಕ್ಕಿಳಿಸುವಂತೆ ಸಲಹೆ ನೀಡಿದ್ದರು, ಚುನಾವಣೆಯಲ್ಲಿ ಗೆದ್ದರೆ ಸಚಿವೆಯನ್ನಾಗಿ ಮಾಡಲಾಗುವುದು ಎಂಬ ಭರವಸೆಯನ್ನೂ ನೀಡಿದ್ದರು, ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ನಾನು, ನಿಮಗೆ ನಿಮ್ಮ  ಮಾತಿಗೆ ತಲೆಯಾಡಿಸುವ ವ್ಯಕ್ತಿ ಮಾತ್ರ ಬೇಕು ಎಂದು ಹೇಳಿದ್ದಾಗಿ ನವಜೋತ್ ಸಿಂಗ್ ಸಿಧು ತಿಳಿಸಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com