ಕಾವೇರಿ ವಿವಾದ: ಸೆ.16ಕ್ಕೆ ಪುದುಚೇರಿ ಬಂದ್, ಬಿಜೆಪಿ ಬೆಂಬಲ

ಕಾವೇರಿ ನದಿ ಹಂಚಿಕೆ ಕುರಿತಂತೆ ಸುಪ್ರೀಂಕೋರ್ಟ್ ತೀರ್ಪು ವಿರೋಧಿಸಿ ಕರ್ನಾಟಕದಲ್ಲಿ ನಡೆದ ಹಿಂಸಾಚಾರ ಖಂಡಿಸಿ ಪುದುಚೇರಿಯಲ್ಲಿ ಸೆ.16 ರಂದು ಬಂದ್ ಆಚರಣೆ ಮಾಡಲಾಗುತ್ತಿದ್ದು, ಬಂದ್ ಗೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಪುದುಚೇರಿ: ಕಾವೇರಿ ನದಿ ಹಂಚಿಕೆ ಕುರಿತಂತೆ ಸುಪ್ರೀಂಕೋರ್ಟ್ ತೀರ್ಪು ವಿರೋಧಿಸಿ ಕರ್ನಾಟಕದಲ್ಲಿ ನಡೆದ ಹಿಂಸಾಚಾರ ಖಂಡಿಸಿ ಪುದುಚೇರಿಯಲ್ಲಿ ಸೆ.16 ರಂದು ಬಂದ್ ಆಚರಣೆ ಮಾಡಲಾಗುತ್ತಿದ್ದು, ಬಂದ್ ಗೆ ಬಿಜೆಪಿ ಗುರುವಾರ ಬೆಂಬಲ ಸೂಚಿಸಿದೆ.

ಕರ್ನಾಟಕದಲ್ಲಿ ನಡೆದ ಹಿಂಸಾಚಾರ ಖಂಡಿಸಿ ಪುದುಚೇರಿಯಲ್ಲಿರುವ ತಮಿಳು ಪರ ಸಂಘಟನೆಗಳು ಶುಕ್ರವಾರ ಬಂದ್ ಆಚರಣೆಗೆ ಕರೆ ನೀಡಿತ್ತು. ಇದರಂತೆ ಸಂಘಟನೆಗಳ ಈ ಕರೆಗೆ ಬಿಜೆಪಿ ಪ್ರತಿಕ್ರಿಯೆ ನೀಡಿದ್ದು, ಬಂದ್ ಆಚರಣೆಗೆ ಬಿಜೆಪಿ ವತಿಯಿಂದ ಸಂಪೂರ್ಣವಾಗಿ ಬೆಂಬಲವಿದೆ ಎಂದು ಹೇಳಿದೆ.

ಈ ಕುರಿತಂತೆ ಮಾತನಾಡಿರುವ ಪುದುಚೇರಿ ಘಟಕದ ಬಿಜೆಪಿ ಅಧ್ಯಕ್ಷ ವಿ.ಸಮಿನಾಥನ್ ಅವರು, ತಮಿಳುಗರ ವಿರುದ್ಧ ಕರ್ನಾಟಕದಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸುತ್ತೇವೆ. ಹಿಂಸಾಚಾರದ ವಿರುದ್ಧ ನೀಡಲಾಗಿರುವ ಬಂದ್ ಕರೆಗೆ ಬಿಜೆಪಿಯ ಬೆಂಬಲವಿದೆ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ನೀರು ಬಿಡುಗಡೆ ಮಾಡುವ ಕುರಿತಂತೆ ಸುಪ್ರೀಂಕೋರ್ಟ್ ನೀಡಿದ್ದ ಆದೇಶಕ್ಕೆ ಅಗೌರವವನ್ನು ಸೂಚಿಸುತ್ತಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ನಡೆದ ಹಿಂಸಾಚಾರ ಖಂಡಿಸಿ ಕೆಲ ದಿನಗಳ ಹಿಂದಷ್ಟೇ 30 ಕ್ಕೂ ಹೆಚ್ಚು ತಮಿಳು ಪರ ಸಂಘಟನೆಗಳು ಸೆ.16 ಕ್ಕೆ ಬಂದ್ ಗೆ ಕರೆ ನೀಡಿದ್ದವು. ಇದರಂತೆ ನಾಳೆ ಪುದುಚೇರಿಯಲ್ಲಿ 12 ಗಂಟೆಗಳ ಕಾಲ ಬಂದ್ ಆಚರಿಸಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com