ಸಮಾಜವಾದಿ ಪಕ್ಷದ ಬಿಕ್ಕಟ್ಟು ಶಮನಕ್ಕೆ ಮುಲಾಯಂ ಸಿಂಗ್ 4 ಅಂಶಗಳ ರಾಜಿ ಸೂತ್ರ

ಉತ್ತರ ಪ್ರದೇಶದ ಆಡಳಿತಾರೂಢ ಸಮಾಜವಾದಿ ಪಕ್ಷದಲ್ಲಿ ತಲೆದೋರಿರುವ ರಾಜಕೀಯ ಬಿಕ್ಕಟ್ಟನ್ನು ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ 4 ಅಂಶಗಳ ರಾಜಿ ...
ಅಖಿಲೇಶ್ ಯಾದವ್, ಮುಲಾಯಂ ಸಿಂಗ್  ಯಾದವ್ ಮತ್ತು ಶಿವಪಾಲ್  ಯಾದವ್
ಅಖಿಲೇಶ್ ಯಾದವ್, ಮುಲಾಯಂ ಸಿಂಗ್ ಯಾದವ್ ಮತ್ತು ಶಿವಪಾಲ್ ಯಾದವ್
Updated on: 

ಲಕ್ನೋ: ಉತ್ತರ ಪ್ರದೇಶದ ಆಡಳಿತಾರೂಢ ಸಮಾಜವಾದಿ ಪಕ್ಷದಲ್ಲಿ ತಲೆದೋರಿರುವ ಕೌಟುಂಬಿಕ ಬಿಕ್ಕಟ್ಟನ್ನು ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ 4 ಅಂಶಗಳ ರಾಜಿ ಸೂತ್ರದ ಮೂಲಕ ಬಗೆ ಹರಿಸಿದ್ದಾರೆ ಎಂದು ಹೇಳಲಾಗಿದೆ.

ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ವಿರುದ್ದ ಅಸಮಾಧಾನ ಗೊಂಡು ರಾಜೀನಾಮೆ ನೀಡಿರುವ ಮುಲಾಯಂ ಸಹೋದರ ಶಿವಪಾಲ್ ಯಾದವ್ ಅವರ ನಿಷ್ಠಾವಂತ 70 ಶಾಸಕರು ರಾತ್ರೀಯಿಡಿ ಶಿವಪಾಲ್ ಯಾದವ್ ಮನೆಯಲ್ಲಿ ಸಮಾಲೋಚಿನೆ ನಡೆಸಿದ್ದಾರೆ ಎನ್ನಲಾಗಿದೆ.

ಕೌಟುಂಬಿಕ ಬಿಕ್ಕಟ್ಟು ತೀವ್ರತೆ ಪಡೆದುಕೊಂಡ ಹಿನ್ನೆಲೆಯಲ್ಲಿ ದೆಹಲಿಯಿಂದ ಲಕ್ನೋಗೆ ಆಗಮಿಸಿದ ಮುಲಾಯಂ ಸಿಂಗ್ ಯಾದವ್ ಇಬ್ಬರನ್ನು ಸಮಾಧಾನ ಪಡಿಸಲು 4 ಅಂಶಗಳ ರಾಜೀ ಸೂತ್ರವನ್ನು ಸಿದ್ಧ ಪಡಿಸಿದ್ದಾರೆ.

ಶಿವಪಾಲ್ ಅವರ ರಾಜೀನಾಮೆಯನ್ನು ತಿರಸ್ಕರಿಸುವ ಮುಲಾಯಂ ಕೆಲವು ದಿನಗಳ ಹಿಂದೆ ಸಂಪುಟದಿಂದ ವಜಾ ಮಾಡಲಾಗಿರುವ ಗಾಯತ್ರಿ ಪ್ರಜಾಪತಿ ಅವರನ್ನು ವಾಪಸ್ ತೆಗೆದುಕೊಳ್ಳಲು ಮತ್ತು ಶಿವಪಾಲ್ ಅವರಿಗೆ ಮತ್ತೆ ಪ್ರಮುಖ ಖಾತೆಗಳನ್ನು ಕೊಡುವುದಾಗಿ ತಿಳಿಸಿದ್ದಾರೆ. ಇದಲ್ಲದೆ ಶಿವಪಾಲ್ ಅವರು ಪಕ್ಷದ ರಾಜ್ಯ ಘಟಕ ಅಧ್ಯಕ್ಷರಾಗಿಯೂ ಮುಂದುವರಿಯುವ ಸಾಧ್ಯತೆಗಳು ಇವೆ. ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆ ಟಿಕೆಟ್‌ ಹಂಚಿಕೆಯಲ್ಲಿ ಅಖಿಲೇಶ್‌ ಅವರಿಗೆ ಹೆಚ್ಚಿನ ಹೊಣೆಗಾರಿಕೆ ನೀಡಲಾಗುವುದು ಎಂದು ತಿಳಿದು ಬಂದಿದೆ.

ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಪ್ರಮುಖ ಖಾತೆಗಳನ್ನು ವಾಪಸ್ ಪಡೆದ ನಂತರ ಕುಪಿತಗೊಂಡ ಶಿವಪಾಲ್ ಸಿಂಗ್ ಯಾದವ್ ಅವರು ಸಚಿವ ಸ್ಥಾನಕ್ಕೆ ಮತ್ತು ಪಕ್ಷದ ಹುದ್ದೆಗೆ ರಾಜೀನಾಮೆ ನೀಡಿದ್ದರಿಂದ ಪಕ್ಷದಲ್ಲಿ ಭಾರಿ ಬಿಕ್ಕಟ್ಟು ತಲೆದೋರಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com