2 ತಿಂಗಳಲ್ಲಿ ಭಕ್ತರು ನೀಡಿದ ಕೂದಲಿನ ಹರಾಜಿನಿಂದ ತಿರುಪತಿ ತಿಮ್ಮಪ್ಪನಿಗೆ ಸೇರಿದ ಹಣವೆಷ್ಟು ಗೊತ್ತೆ?

ತಮ್ಮ ಬೇಡಿಕೆ ಈಡೇರಿಕೆಗಾಗಿ ಲಕ್ಷಾಂತರ ಭಕ್ತರು ಕಳೆದ ಎರಡು ತಿಂಗಳಲ್ಲಿ ಏಳು ಬೆಟ್ಟದ ವಾಸಿ ತಿರುಪತಿ ತಿಮ್ಮಪ್ಪನಿಗೆ ನೀಡಿದ ಕೂದಲಿನ ಹರಾಜಿನಿಂದ...
ತಿರುಪತಿ
ತಿರುಪತಿ

ತಿರುಪತಿ: ತಮ್ಮ ಬೇಡಿಕೆ ಈಡೇರಿಕೆಗಾಗಿ ಲಕ್ಷಾಂತರ ಭಕ್ತರು ಕಳೆದ ಎರಡು ತಿಂಗಳಲ್ಲಿ ಏಳು ಬೆಟ್ಟದ ವಾಸಿ ತಿರುಪತಿ ತಿಮ್ಮಪ್ಪನಿಗೆ ನೀಡಿದ ಕೂದಲಿನ ಹರಾಜಿನಿಂದ ಸುಮಾರು 17.82 ಕೋಟಿ ರು ಹಣ ಬಂದಿದೆ.

ಭಕ್ತಾದಿಗಳ ಕೇಶ ಮುಂಡನದಿಂದ ಜುಲೈನಲ್ಲಿ 11.88 ಕೋಟಿ, ಮತ್ತು ಆಗಸ್ಟ್ ನಲ್ಲಿ 5.94 ಕೋಟಿ ರೂ ಹಣ ಹರಾಜಿನಲ್ಲಿ ಲಭ್ಯವಾಗಿದೆ ಎಂದು ತಿರಪತಿ ತಿರುಮಲ ದೇವಾಸ್ಥಾನ ಆಡಳಿತ ಮಂಡಳಿ ತಿಳಿಸಿದೆ.

ಧರ್ಮದರ್ಶನ ಪಡೆಯಲು ಸಾಲಲ್ಲಿ ಬರುವ ಭಕ್ತರ ಜೊತೆಗೆ ಬರುವ ಮಕ್ಕಳಿಗೆ ಉಚಿತವಾಗಿ ಹಾಲು ನೀಡಲು ಟಿಟಿಡಿ ಸುಮಾರು 11.28 ಕೋಟಿ ರೂ ವೆಚ್ಚದಲ್ಲಿ 39.32 ಲಕ್ಷ ಲೀಟರ್ ಹಾಲು ಖರೀದಿಸಲಿದೆ. ಜೊತೆಗೆ ಹರ್ಯಾಣದ ಕಾರ್ನಲ್ ಮಿಲ್ಕ್ ಫುಡ್ ನಿಂದ 2.25 ಲಕ್ಷ ಕೆಜಿ
ಹಸುವಿನ ತುಪ್ಪ ಖರೀದಿಸಲಾಗುವುದು, ಪ್ರತಿ ಕೆಜಿ ತುಪ್ಪಕ್ಕೆ 376 ರೂ ನಂತೆ ಒಟ್ಟು 8.46 ಕೋಟಿ ಹಣ ವೆಚ್ಚ ತಗುಲಲಿದೆ ಎಂದು ಟಿಟಿಡಿ ಅಧ್ಯಕ್ಷ ಚಡವಾಲಡ ಕೃಷ್ಣಮೂರ್ತಿ ತಿಳಿಸಿದ್ದಾರೆ.

2016-17ರಲ್ಲಿ ಭಕ್ತರು ನೀಡುವ ಕೇಶ ಮುಂಡನದ ಕೂದಲು ಹರಾಜಿನಿಂದ 150 ಕೋಟಿ ರು ಹಣ ಬರಲಿದೆ ಎಂದು ಅಂದಾಜಿಸಿರುವುದಾಗಿ ಟಿಟಿಡಿ ಸಾರ್ವಜನಿಕ ಸಂಪರ್ಕ ಅಧಿಕಾರಿ ತಲಾರಿ ರವಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com