

ಶ್ರೀನಗರ: 21 ಜನರನ್ನು ಹೊತ್ತೊಯ್ಯುತ್ತಿದ್ದ ಮಿನಿ ಬಸ್ ವೊಂದು ಕಂದಕಕ್ಕೆ ಉರುಳಿದ್ದು ಪರಿಣಾಮ 7 ಮಂದಿ ಸಾವನ್ನಪ್ಪಿದ್ದು 9 ಜನರಿಗೆ ಗಂಭೀರ ಗಾಯಗಳಾಗಿವೆ.
ಜಮ್ಮು ಮತ್ತು ಕಾಶ್ಮೀರದ ಟ್ರಾಗ್ ಬಾಲ್ ನ ಗುರೇಜ್-ಬಂಡಿಪೊರ ರಸ್ತೆ ಬಳಿ ಕಳೆದ ರಾತ್ರಿ ಈ ಅವಗಡ ಸಂಭವಿಸಿದ್ದು, ಸ್ಥಳದಲ್ಲೇ ಐದು ಮಂದಿ ಸಾವನ್ನಪ್ಪಿದ್ದು ಇನ್ನಿಬ್ಬರು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಇನ್ನುಳಿದಂತೆ 9 ಮಂದಿಗೆ ಗಾಯಗಳಾಗಿದ್ದು ಬಂಡಿಪೋರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಸ್ ನ ಚಾಲಕ ಕಣ್ಮರೆಯಾಗಿದ್ದು ಆತನಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಬಾರ್ಡರ್ ರೋಡ್ಸ್ ಆರ್ಗನೈಜೆಷನ್(ಬಿಆರ್ಒ)ಗೆ ಸೇರಿದ ಬಸ್ ಇದಾಗಿದೆ.