ದೆಹಲಿಯ ಎಸ್ ಪಿ ರಸ್ತೆಯಲ್ಲಿರುವ ಸುಲ್ತಾನ್ ಪುರಿಯಲ್ಲಿ ಸಂಜೆ 5.30ರ ವೇಳೆಗೆ ಈ ಘಟನೆ ನಡೆದಿದೆ. ತರಗತಿಯಲ್ಲಿ ಪರೀಕ್ಷೆ ನಡೆಯುತ್ತಿದ್ದಾಗ ಇಬ್ಬರು ವಿದ್ಯಾರ್ಥಿಗಳು ಅವರ ಮೇಲೆ ಚೂರಿಯಿಂದ ದಾಳಿ ಮಾಡಿದ್ದಾರೆ. ಕುಸಿದು ಬಿದ್ದ ಮುಕೇಶ್ ಅವರನ್ನು ಶಾಲಾ ಸಿಬ್ಬಂದಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ನೀಡುವ ಮುನ್ನ ಹಣ ಮುಂಗಡ ಪಾವತಿಸಿ ಎಂದು ಆಸ್ಪತ್ರೆಯಲ್ಲಿ ಕೇಳಿದ್ದಾರೆ. ಹಲ್ಲೆ ನಡೆಸಿದ ಇಬ್ಬರು ವಿದ್ಯಾರ್ಥಿಗಳ ಹಾಜರಾತಿ ತೀರಾ ಕಡಿಮೆಯಿದ್ದುದರಿಂದ ಅವರನ್ನು ಪರೀಕ್ಷೆ ಬರೆಯಲು ಮುಕೇಶ್ ಬಿಟ್ಟಿರಲಿಲ್ಲ ಎಂದು ಸುಮಿತ್ ಎಂಬ ಮತ್ತೊಬ್ಬ ಶಾಲಾ ಸಿಬ್ಬಂದಿ ಹೇಳುತ್ತಾರೆ.