ಕಾಶ್ಮೀರದ ಜೊತೆ ಬಿಹಾರವನ್ನೂ ತೆಗೆದುಕೊಳ್ಳಿ: ಕಾಟ್ಜು ವಿರುದ್ಧ ಎಫ್ ಐ ಆರ್

ನಿಮಗೆ ಕಾಶ್ಮೀರವನ್ನು ಬಿಟ್ಟುಕೊಡುತ್ತೇವೆ, ಆದರೆ ಒಂದು ಷರತ್ತು, ಅದರ ಜತೆ ಬಿಹಾರವನ್ನೂ ತೆಗೆದುಕೊಳ್ಳಬೇಕು ಎಂದು ಹೇಳುವ ಮೂಲಕ...
ಮಾರ್ಕಂಡೇಯ ಕಾಟ್ಜು
ಮಾರ್ಕಂಡೇಯ ಕಾಟ್ಜು
Updated on: 

ಪಾಟ್ನಾ:  ನಿಮಗೆ ಕಾಶ್ಮೀರವನ್ನು ಬಿಟ್ಟುಕೊಡುತ್ತೇವೆ, ಆದರೆ ಒಂದು ಷರತ್ತು, ಅದರ ಜತೆ ಬಿಹಾರವನ್ನೂ ತೆಗೆದುಕೊಳ್ಳಬೇಕು ಎಂದು ಹೇಳುವ ಮೂಲಕ ಸುಪ್ರೀಂ ಕೋರ್ಟ್‌ ಮಾಜಿ ನ್ಯಾಯಾಧೀಶ ಮಾರ್ಕಂಡೇಯ ಕಾಟ್ಜು ವಿವಾದಕ್ಕೆ ನಾಂದಿ ಹಾಡಿದ್ದಾರೆ.

ಮಾರ್ಕಂಡೇಯ ಕಾಟ್ಜು ಅವರು ತಮ್ಮ ಫೇಸ್ ಬುಕ್ ನಲ್ಲಿ ಹಾಕಿಕೊಂಡಿರುವ ಈ ಪೋಸ್ಟ್ ವಿರುದ್ಧ ಬಿಹಾರ ಜೆಡಿಯು ಶಾಸಕ ಎಫ್ ಐ ಆರ್ ದಾಖಲಿಸಿದ್ದಾರೆ.  ಕಾಟ್ಜು ಅವರ ಈ ಹೇಳಿಕೆ ರಾಜ್ಯ, ದೇಶ ಮತ್ತು ಹೊರ ದೇಶದಲ್ಲಿರುವ ಸುಮಾರು 10.5 ಕೋಟಿ ಬಿಹಾರಿಗರಿಗೆ ನೋವುಂಟು ಮಾಡಿದ್ದಾರೆ ಎಂದು ಶಾಸಕ ನೀರಜ್ ಕುಮಾರ್ ತಿಳಿಸಿದ್ದಾರೆ.

ಇದೊಂದು ಪ್ಯಾಕೇಜ್ ಡೀಲ್ ಆಗಿದ್ದು, ಕಾಶ್ಮೀರ ಬೇಕಾದರೇ ಬಿಹಾರವನ್ನು ಜೊತೆಗೆ ತೆಗೆದುಕೊಳ್ಳಬೇಕು . ಕಾಶ್ಮೀರ ಒಂದನ್ನೇ ನೀಡಲು ಸಾಧ್ಯವಿಲ್ಲ ಎಂದು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com