ಬ್ಯಾಟರಿ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಈ ವರೆಗೆ 6 ಕ್ಕೂ ಹೆಚ್ಚು ಪ್ರಮುಖ ಆಟೋಮೊಬೈಲ್ ಸಂಸ್ಥೆಗಳು, ಬ್ಯಾಟರಿ ಉತ್ಪಾದನೆ ಸಂಸ್ಥೆಗಳು, ಸಾರ್ವಜನಿಕ ವಲಯದ ಸಂಸ್ಥೆಗಳು ಇಸ್ರೋ ಸಂಸ್ಥೆಯನ್ನು ಸಂಪರ್ಕಿಸಿದ್ದು, ಮಹೇಂದ್ರ ರೆನಾಲ್ಟ್, ಹ್ಯೂಂಡೈ, ನಿಸಾನ್, ಟಾಟಾ ಮೋಟಾರ್ಸ್, ಹೈ ಎನರ್ಜಿ ಬ್ಯಾಟರಿಸ್ ಬಿಹೆಚ್ ಇಎಲ್ ಹಾಗೂ ಇಂಡಿಯನ್ ಆಯಿಲ್ ಸಂಸ್ಥೆಗಳು ಇಸ್ರೋ ಅಭಿವೃದ್ಧಿಪಡಿಸಿರುವ ತಂತ್ರಜ್ಞಾನದಿಂದ ಲಿಥಿಯಂ-ಇಯೋನ್ ಬ್ಯಾಟರಿ ಉತ್ಪಾದನೆಗೆ ಆಸಕ್ತಿ ತೋರಿವೆ.