ಕುಲಭೂಷಣ್ ಜಾದವ್‌ ಪರ ಸಂಸತ್ ನಲ್ಲಿ ಒಕ್ಕೊರಲ ಧ್ವನಿ; ಪಾಕ್ ಕ್ರಮಕ್ಕೆ ಪಕ್ಷಾತೀತ ಖಂಡನೆ

ಪಾಕಿಸ್ತಾನದ ನ್ಯಾಯಾಲಯ ಕುಲ್’ಭೂಷಣ್ ಯಾದವ್ ಗೆ ಗಲ್ಲು ಶಿಕ್ಷೆ ವಿಧಿಸಿರುವ ಪ್ರಕರಣ ಲೊಕಸಭೆಯಲ್ಲಿ ಚರ್ಚೆಗೆ ಬಂದಿದೆ.
ಸಂಸತ್(ಸಂಗ್ರಹ ಚಿತ್ರ)
ಸಂಸತ್(ಸಂಗ್ರಹ ಚಿತ್ರ)
Updated on: 
ನವದೆಹಲಿ: ಪಾಕಿಸ್ತಾನದ ನ್ಯಾಯಾಲಯ ಕುಲಭೂಷಣ್ ಜಾಧವ್‌ ಗೆ ಗಲ್ಲು ಶಿಕ್ಷೆ ವಿಧಿಸಿರುವ ಪ್ರಕರಣ ಲೊಕಸಭೆಯಲ್ಲಿ ಚರ್ಚೆಗೆ ಬಂದಿದೆ. 
ಏ.11 ರ ಕಲಾಪ ಆರಂಭವಾಗುತ್ತಿದ್ದಂತೆಯೇ ಲೋಕಸಭೆಯಲ್ಲಿ ವಿಷಯ ಪ್ರಸ್ತಾಪವಾಗಿದ್ದು, ಸಂಸತ್ ನಲ್ಲಿ ಪಕ್ಷಾತೀತವಾಗಿ ಪಾಕಿಸ್ತಾನದ ವಿರುದ್ಧ ಖಂಡನೆ ವ್ಯಕ್ತವಾಗಿದೆ. ಭಾರತದ ಪ್ರಜೆ ಕುಲಭೂಷಣ್ ಜಾಧವ್‌ ವಿರುದ್ಧ ಬೇಹುಗಾರಿಕೆ ಆರೋಪ ಹೊರಿಸಿ ಗಲ್ಲು ಶಿಕ್ಷೆ ಪ್ರಕಟಿಸಿರುವ ಪಾಕಿಸ್ತಾನದ ನಡೆಗೆ ಪಕ್ಷಾತೀತ ಖಂಡನೆ ವ್ಯಕ್ತವಾಗಿದ್ದು, ಕುಲ್ ಭೂಷಣ್ ಯಾದವ್ ರಕ್ಷಣೆಗೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕೆಂಬ ಒತ್ತಡ ಹೆಚ್ಚುತ್ತಿದೆ.  
ಕುಲಭೂಷಣ್ ಜಾಧವ್‌ ಪ್ರಕರಣದ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕೆಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ನಿಲುವಳಿ ಸೂಚನೆ ಮಂಡಿಸಿದ್ದಾರೆ. ಪಾಕಿಸ್ತಾನ ಸರ್ಕಾರದ ವಿರುದ್ಧ ಲೋಕಸಭೆಯಲ್ಲಿ  ಕುಲ್’ಭೂಷಣ್ ಯಾದವ್ ಪರವಾಗಿ ಧ್ವನಿ ಎತ್ತಿರುವ ಸಂಸದರು, ಪಾಕ್ ಭಾರತೀಯ ಪ್ರಜೆಯನ್ನು ಅಪಹರಣ ಮಾಡಿದ್ದು ಪಾಕಿಸ್ತಾನವನ್ನು ಉಗ್ರರ ಸರ್ಕಾರ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 
ಇದೇ ವೇಳೆ ಎಂಐಎಂ ಪಕ್ಷದ ಸಂಸದ ಅಸಾವುದ್ದೀನ್ ಓವೈಸಿ ಸಹ ಕುಲ್ ಭೂಷಣ್ ಯಾದವ್ ರಕ್ಷಣೆಗೆ ಒತ್ತಾಯಿಸಿದ್ದು, ಪಾಕಿಸ್ತಾನದಲ್ಲಿರುವ ಭಾರತೀಯ ಪ್ರಜೆ ಬದುಕಿ ಉಳಿಯದೇ ಇದ್ದರೆ ಅದು ಸರ್ಕಾರದ ವೈಫಲ್ಯವಾಗಲಿದೆ. ಕುಲ್ ಭೂಷಣ್ ಯಾದವ್ ಅವರನ್ನು ರಕ್ಷಣೆ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ. ಸಂಸದರ ಆಗ್ರಹಕ್ಕೆ ಪ್ರತಿಕ್ರಿಯೆ ನೀಡಿರುವ ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್, ಕುಲ್’ಭೂಷಣ್ ಯಾದವ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜನಾಥ್ ಸಿಂಗ್ ಹೇಳಿಕೆ ನೀಡುತ್ತಾರೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com