ಇವಿಎಂ ವಿವಾದ: ವಿಪಕ್ಷಗಳಿಗೆ ಬಿಜೆಪಿ ಏಳಿಗೆಯನ್ನು ಜೀರ್ಣಿಸಿಕೊಳ್ಳಲಾಗುತ್ತಿಲ್ಲ- ನಾಯ್ಡು

ಬಿಜೆಪಿಯ ಏಳಿಗೆಯನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದ ವಿರೋಧ ಪಕ್ಷಗಳು ಬಿಜೆಪಿ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುತ್ತಿದೆ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಗುರುವಾರ ಹೇಳಿದ್ದಾರೆ...
ಕೇಂದ್ರ ಸಚಿವ ವೆಂಕಯ್ಯ ನಾಯ್ಡು
ಕೇಂದ್ರ ಸಚಿವ ವೆಂಕಯ್ಯ ನಾಯ್ಡು
Updated on: 
ನವದೆಹಲಿ: ಬಿಜೆಪಿಯ ಏಳಿಗೆಯನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದ ವಿರೋಧ ಪಕ್ಷಗಳು ಬಿಜೆಪಿ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುತ್ತಿದೆ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಗುರುವಾರ ಹೇಳಿದ್ದಾರೆ. 
ಇವಿಎಂನಲ್ಲಿ ದೋಷವಿತ್ತು ಎಂಬ ವಿರೋಧಪಕ್ಷಗಳ ಆರೋಪ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಎನ್'ಡಿಎ ಸರ್ಕಾರ ತನ್ನ ಕಾರ್ಯಗಳನ್ನು ಪಾರದರ್ಶಕತೆಯಿಂದ ಮಾಡುತ್ತಿದೆ. ಸರ್ಕಾರದ ಮೇಲೆ ಜನರಿಟ್ಟಿರುವ ನಂಬಿಕೆಯನ್ನು ಹಾಳು ಮಾಡಲು ವಿರೋಧಪಕ್ಷಗಳು ಈ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಹೇಳಿದ್ದಾರೆ. 
ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಪಕ್ಷಗಳು ಹಲವು ಬಾರಿ ಸೋಲನ್ನು ಕಂಡಿದೆ. ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಾಗದೆಯೇ ಈ ರೀತಿಯಾಗಿ ನಡೆದುಕೊಳ್ಳುತ್ತಿದೆ. ದೇಶದ ಜನತೆ ಬಿಜೆಪಿಯನ್ನು ಆಯ್ಕೆ ಮಾಡಿಕೊಂಡಿರುವುದು ಅವರಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿಯೇ ಬಿಜೆಪಿ ಹಾಗೂ ಪ್ರಧಾನಮಂತ್ರಿಗಳ ಮೇಲೆ ಜನರು ಉತ್ತಮವಾಗಿ ಆಲೋಚನೆ ಮಾಡಬಾರದೆಂದು, ನಮ್ಮ ಪಕ್ಷದ ಮೇಲೆ ಜನರಿಗೆ ಕೆಟ್ಟ ಭಾವನೆಯನ್ನುಂಟು ಮಾಡಲು ಈ ರೀತಿಯ ಕೆಲಸಗಳನ್ನು ಮಾಡುತ್ತಿದ್ದಾರೆ. ಸಂಸತ್ತು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಲು ಬಿಡುತ್ತಿಲ್ಲ.
ಬಿಜೆಪಿ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದ ವಿರೋಧ ಪಕ್ಷಗಳು ಇದೀಗ ಚುನಾವಣಾ ಆಯೋಗವನ್ನೇ ಗುರಿ ಮಾಡುತ್ತಿವೆ. ಗೆಲವು ಸಾಧಿಸಿದಾಗ ಎಲ್ಲವೂ ಸರಿಯಿದೆ ಎನ್ನುವ ವಿರೋಧ ಪಕ್ಷಗಳು ಸೋತರೆ ಮಾತ್ರ ದೋಷವಿದೆ ಎಂದು ಮತಯಂತ್ರಗಳ ಮೇಲೆ ಹಾಕುತ್ತಾರೆ. 2004ರಲ್ಲಿ ಕಾಂಗ್ರೆಸ್ ಗೆಲವು ಸಾಧಿಸಿದ್ದಾಗ ಇವಿಎಂ ಸರಿಯಾಗಿತ್ತು. ದೆಹಲಿಯಲ್ಲಿ ಆಪ್ ಗೆಲವು ಸಾಧಿಸಿದ್ದಾಗಲೂ ಇವಿಎಂ ಸರಿಯಿತ್ತು. ಬಿಜೆಪಿ ಗೆಲವು ಸಾಧಿಸಿದಾಗ ಇವಿಎಂನಲ್ಲಿ ದೋಷವಿತ್ತು ಎಂದು ಆರೋಪಿಸುತ್ತಿದ್ದಾರೆ. ಬಿಜೆಪಿ ವಿರುದ್ಧ ವಿರೋಧ ಪಕ್ಷಗಳು ರಾಷ್ಟ್ರಪತಿಗಳಿಗೆ ದೂರು ನೀಡಿರುವುದು ಸರಿಯಲ್ಲ. ನಾವು ಪಾರದರ್ಶಕತೆಯಿಂದ ಕೆಲಸವನ್ನು ಮಾಡುತ್ತಿದ್ದೇವೆಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com