ಮಧ್ಯಪ್ರದೇಶದ ಮಾಜಿ ಪೊಲೀಸೊಬ್ಬರು ಫೆಬ್ರವರಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು, ಫಿಸ್ತೂಲದಿಂದ ನರಳುತ್ತಿದ್ದ ಪೊಲೀಸಪ್ಪನಿಗೆ ಸರ್ಜರಿ ಮಾಡಲಾಗಿತ್ತು. ಆಸ್ಪತ್ರೆಗೆ 13.45 ಲಕ್ಷ ಬಿಲ್ ಪಾವತಿ ಮಾಡಬೇಕಿತ್ತು. ಆದರೆ ಆಸ್ಪತ್ರೆ ತನ್ನ ತಂದೆಗೆ ಸರಿಯಾದ ಚಿಕಿತ್ಸೆ ನೀಡಲಿಲ್ಲ, ಜೊತೆಗೆ ಆಸ್ಪತ್ರೆಯಿಂದ ಕರೆದುಕೊಂಡು ಹೋಗಲು ಬಿಟ್ಟಿಲ್ಲ ಎಂದು ಆರೋಪಿಸಿದ್ದರು, ಬಿಲ್ ಪಾವತಿಸದ ಕಾರಣ ರೋಗಿಯನ್ನು ಖಾಸಗಿ ವಾರ್ಡ್ ನಿಂದ ಜನರಲ್ ವಾರ್ಡ್ ಗೆ ಶಿಫ್ಟ್ ಮಾಡಲಾಗಿತ್ತು. ಒಟ್ಟು 16.75 ಲಕ್ಷ ಬಿಲ್ ಆಗಿತ್ತು, ಆದರಲ್ಲಿ ಪೊಲೀಸಪ್ಪನ ಮಗ ಕೇವಲ 3.3 ಲಕ್ಷ ಮಾತ್ರ ಪಾವತಿಸಿದ್ದರು.