ಗುರುಗ್ರಾಮ್: ಕೆಲಸದ ಆಮಿಷವೊಡ್ಡಿ ಮಹಿಳೆ ಮೇಲೆ ಗ್ಯಾಂಗ್ ರೇಪ್

ಗುರುಗ್ರಾಮ್ ನ ಖಾಸಗಿ ಕಂಪನಿಯೊಂದರಲ್ಲಿ ಹೌಸ್ ಕೀಪರ್ 26 ವರ್ಷದ ಮಹಿಳೆಯೊಬ್ಬರಿಗೆ ಅದಕ್ಕಿಂತ ಉತ್ತಮ ಕೆಲಸ ಕೊಡಿಸುವುದಾಗಿ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಗುರುಗ್ರಾಮ್: ಗುರುಗ್ರಾಮ್ ನ ಖಾಸಗಿ ಕಂಪನಿಯೊಂದರಲ್ಲಿ ಹೌಸ್ ಕೀಪರ್ 26 ವರ್ಷದ ಮಹಿಳೆಯೊಬ್ಬರಿಗೆ ಅದಕ್ಕಿಂತ ಉತ್ತಮ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿ ಆರು ಕಾಮುಕರು ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ಮಂಗಳವಾರ ರಾತ್ರಿ ಬಿಲಸ್ಪುರ್ ಸಮೀಪದ ಗ್ರಾಮವೊಂದರಲ್ಲಿ ನಡೆದಿದೆ.
ಆರು ಮಂದಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವುದು ವೈದ್ಯಕೀಯ ಪರೀಕ್ಷೆಯಿಂದ ದೃಡಪಟ್ಟಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಬುಧವಾರ ಪೊಲೀಸರು ತಿಳಿಸಿದ್ದಾರೆ. 
ಬಂಧಿತ ಆರೋಪಿಗಳು ಕುಲದೀಪ್, ಸಾಕೇತ್ ಶರ್ಮಾ, ರಾಕೇಶ್, ದೀಪಕ್, ಜಿತೇಂದ್ರ, ಅಮಿತ್ ಮತ್ತು ಕಾಲೂರಾಮ್ ಎಂದು ಗುರುತಿಸಲಾಗಿದೆ.
ಕಳೆದ ಮಂಗಳವಾರ ರಾತ್ರಿ ಬಿಲಾಸ್ಪುರ್ ಸಮೀಪ ಕಾಮುಕರು ಈ ಕೃತ್ಯವೆಸಗಿದ್ದು, ಕಾಲೂರಾಮ್ ಎಂಬಾತ ಮಹಿಳೆಗೆ ಮೊದಲೇ ಪರಿಚಯಸ್ಥನಾಗಿದ್ದ. ಬೇರೆ ಕಂಪನಿಯಲ್ಲಿ ಒಳ್ಳೆ ಕೆಲಸ ಕೊಡಿಸ್ತೀನಿ ಅಂತಾ ಹೇಳಿದ್ದ. ಸಂಜೆ ೫.೩೦ರ ವೇಳೆಗೆ ಕರೆ ಮಾಡಿ ನಿನಗೆ ಕೆಲಸ ಪಕ್ಕಾ ಆಗಿದೆ ಕೂಡಲೇ ಐಎಂಟಿ ಚೌಕ್ ಬಳಿ ಬಾ ಅಂತಾ ಹೇಳಿದ್ದ. ಅವನ ಮಾತನ್ನು ನಂಬಿ ಹೊರಟ ಮಹಿಳೆ ಸಂಜೆ ೭ ಗಂಟೆ ವೇಳೆಗೆ ಮನೇಸರ್ ತಲುಪಿದ್ದಾಳೆ.
ಸೂಪರ್ ವೈಸರ್ ಬರ್ತಾರೆ ಅಂತ ನಂಬಿಸಿ ಕಾಲೂರಾಮ್ ಅವಳನ್ನು ಸ್ವಲ್ಪ ಹೊತ್ತು ಕಾಯಿಸಿದ್ದ. ೧೫ ನಿಮಿಷಗಳ ನಂತರ ಬೈಕ್ ನಲ್ಲಿ ಬಂದವನೊಬ್ಬ ಸೂಪರ್ ವೈಸರ್ ಅಂತಾ ಹೇಳಿಕೊಂಡು ಮಹಿಳೆಯನ್ನು ಕರೆದೊಯ್ದ. ಕಂಪನಿಗೆ ಕರೆದುಕೊಂಡು ಹೋಗುವ ಬದಲು ಶಂಕರ್ ಕಿ ಧಾನಿ ಎಂಬ ಹಳ್ಳಿಗೆ ಕರೆತಂದಿದ್ದ. ಅಲ್ಲಿ ಮೊದಲೇ ಇಬ್ಬರು ವ್ಯಕ್ತಿಗಳು ಹಾಜರಿದ್ದರು. ಇನ್ನು ಮೂವರು ಕೂಡಿಕೊಂಡು ಒಟ್ಟು ೬ ಮಂದಿ ಆಕೆ ಮೇಲೆ ಅತ್ಯಾಚಾರ ಮಾಡಿದ್ದಾರೆ. ಬೆಳಗ್ಗೆ ೬ ಗಂಟೆ ವೇಳೆಗೆ ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಬಂದ ಮಹಿಳೆ ಪತಿಗೆ ವಿಷಯ ತಿಳಿಸಿ, ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ. ಮಧ್ಯಪ್ರದೇಶ ಮೂಲದ ಈ ಮಹಿಳೆ ಮಗು ಮತ್ತು ಪತಿಯೊಂದಿಗೆ ಗುರುಗ್ರಾಮ್ ನಲ್ಲಿ ವಾಸಿಸುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com