ಅತಿ ಹೆಚ್ಚು ಪ್ರವಾಹಕ್ಕೆ ಒಳಗಾದ ಜಿಲ್ಲೆ ಬನಸ್ಕಾಂತ. ಈ ಜಿಲ್ಲೆಯ ಧನೆರಾ ನಗರದಲ್ಲಿ ಸುಮಾರು 8ರಿಂದ 10 ಅತಿ ನೀರು ಆವರಿಸಿತ್ತು. ಪ್ರವಾಹ ಇಳಿಮುಖವಾಗಿದ್ದು ಮನೆ, ಮಸೀದಿ ಮತ್ತು ದೇವಾಲಯಗಳಲ್ಲಿ ಹೂಳು ತುಂಬಿತ್ತು. ಈ ದೇವಾಲಯಗಳಲ್ಲಿ ತುಂಬಿಕೊಂಡಿದ್ದ ಹೂಳನ್ನು ತೆಗೆಯಲು ಪಾಲಂಪುರ್ ನ ಜಮೀಯತ್ ಉಲೇಮಾ-ಎ-ಹಿಂದ್ ನ ಮುಸ್ಲಿಂ ಬಾಂಧವರು ಕೈಜೋಡಿಸಿದ್ದಾರೆ.