ಸುನಂದಾ ಪುಷ್ಕರ್ ಪ್ರಕರಣ: ತಪ್ಪು ವರದಿ ಪ್ರಕಟಿಸದಂತೆ ರಿಪಬ್ಲಿಕ್ ಚಾನಲ್ ಗೆ ಹೈಕೋರ್ಟ್ ಸೂಚನೆ

ಸುನಂದಾ ಪುಷ್ಕರ್ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತ ಅರ್ನಬ್ ಗೋಸ್ವಾಮಿ ಹಾಗೂ ರಿಪಬ್ಲಿಕ್ ಚಾನಲ್ ವಿರುದ್ಧ ಕಾಂಗ್ರೆಸ್ ನಾಯಕ ಶಶಿ ತರೂರ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿಯ ಹೈಕೋರ್ಟ್...
ಶಶಿ ತರೂರ್
ಶಶಿ ತರೂರ್
Updated on: 
ನವದೆಹಲಿ: ಸುನಂದಾ ಪುಷ್ಕರ್ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತ ಅರ್ನಬ್ ಗೋಸ್ವಾಮಿ ಹಾಗೂ ರಿಪಬ್ಲಿಕ್ ಚಾನಲ್ ವಿರುದ್ಧ ಕಾಂಗ್ರೆಸ್ ನಾಯಕ ಶಶಿ ತರೂರ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿಯ ಹೈಕೋರ್ಟ್ ಪುರಸ್ಕರಿಸಿದ್ದು, ತಪ್ಪು ವರದಿಗಳನ್ನು ಪ್ರಕಟಿಸದಂತೆ ರಿಪಬ್ಲಿಕ್ ಚಾನಲ್ ಗೆ ಸೂಚನೆ ನೀಡಿದೆ. 
ಸುನಂದ ಪುಷ್ಕರ್ ಸಾವಿಗೆ ಸಂಬಂಧಪಟ್ಟಂತೆ ತಮ್ಮ ವಿರುದ್ಧ ಮಾನನಷ್ಟಕಾರಿ ವರದಿಗಳನ್ನು ಪ್ರಕಟಿಸದಂತೆ ರಿಪಬ್ಲಿಕ್ ಚಾನಲ್ ಗೆ ನಿರ್ಬಂಧ ವಿಧಿಸಬೇಕೆಂದು ಶಶಿ ತರೂರ್ ದೆಹಲಿ ಕೋರ್ಟ್ ಮೊರೆ ಹೋಗಿದ್ದರು. ಶಶಿ ತರೂರ್ ಅರ್ಜಿಯನ್ನು ಪುರಸ್ಕರಿಸಿರುವ ದೆಹಲಿ ಕೋರ್ಟ್ ಸುನಂದಾ ಪುಷ್ಕರ್ ಸಾವಿಗೆ ಸಂಬಂಧಿಸಿದಂತೆ ತಪ್ಪು ವರದಿಗಳನ್ನು ಪ್ರಕಟಿಸಬಾರದು ಹಾಗೂ ಶಶಿ ತರೂರ್ ಅವರು ಪ್ರತಿಕ್ರಿಯೆ ನೀಡದೇ ಇರುವುದನ್ನು ಗೌರವಿಸಬೇಕು ಎಂದು ಹೇಳಿದೆ. 
ಪುಷ್ಕರ್ ಸಾವಿನ ಪ್ರಕರಣದ ವರದಿಯಲ್ಲಿ ತಮ್ಮನ್ನು ಕ್ರಿಮಿನಲ್ ಎಂಬ ಶಬ್ದ ಪ್ರಯೋಗಿಸಿ ವರದಿ ಪ್ರಕಟಿಸಿದ್ದನ್ನು ವಿರೋಧಿಸಿದ್ದ ಶಶಿ ತರೂರ್, ಮೇ.29 ರಂದು ಅರ್ನಬ್ ಗೋಸ್ವಾಮಿ ವಿರುದ್ಧ 2 ಕೋಟಿ ರೂಪಾಯಿಗಳಿಗೆ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ್ದ ಹೈಕೋರ್ಟ್, ಅರ್ನಬ್ ಗೋಸ್ವಾಮಿ ಅವರ ಚಾನಲ್ ಸುನಂದಾ ಪುಷ್ಕರ್ ಪ್ರಕರಣಕ್ಕೆ ಸಂಬಂಧಿಸಿದ ನೈಜ ಅಂಶಗಳನ್ನು ವರದಿ ಮಾಡಬಹುದಾಗಿದೆ. ಆದರೆ ಶಶಿ ತರೂರ್ ಅವರನ್ನು ಕ್ರಿಮಿನಲ್ ಎಂದು ಹೇಳುವಹಾಗಿಲ್ಲ ಎಂದಿತ್ತು. ಈಗ ಮಾನನಷ್ಟ ಮೊಕದ್ದಮೆ ಹಾಕಿರುವುದರ ಬಗ್ಗೆ ಆಗಸ್ಟ್ 16 ರೊಳಗೆ ಪ್ರತಿಕ್ರಿಯೆ ನೀಡುವಂತೆ ಹೈಕೋರ್ಟ್ ಅರ್ನಬ್ ಗೋಸ್ವಾಮಿ ಹಾಗೂ ರಿಪಬ್ಲಿಕ್ ಚಾನಲ್ ಗೆ ಸೂಚನೆ ನೀಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com