ರಾಜಸ್ತಾನ: ರೈಲಿನ ಟಾಪ್ ಮೇಲ್ಗಡೆಯಿಂದ ಕೆಳಗೆ ಜಿಗಿಯುವಾಗ ಬಿದ್ದು ಐವರ ದುರ್ಮರಣ

ರೈಲಿನ ಮೇಲೆ ಕುಳಿತು ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಕೆಳಗೆ ಇಳಿಯುವಾಗ ಹಳಿ ಮೇಲೆ ಬರುತ್ತಿದ್ದ ಮತ್ತೊಂದು ರೈಲಿನಡಿ ಸಿಲುಕಿ 5 ಮಂದಿ ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ರಾಜಸ್ತಾನದಲ್ಲಿ ಭಾನುವಾರ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಜೈಪುರ: ರೈಲಿನ ಮೇಲಿ ಕುಳಿತು ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಕೆಳಗೆ ಇಳಿಯುವಾಗ ಹಳಿ ಮೇಲೆ ಬರುತ್ತಿದ್ದ ಮತ್ತೊಂದು ರೈಲಿನಡಿ ಸಿಲುಕಿ 5 ಮಂದಿ ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ರಾಜಸ್ತಾನದಲ್ಲಿ ಭಾನುವಾರ  ನಡೆದಿದೆ.

ರಾಜಸ್ತಾನದ ಸವಿಮೋಧ್ಪುರ್ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಪ್ಲಾಟ್ ಫಾರ್ಮ್ ನಂಬರ್ 1ಕ್ಕೆ ಆಗಮಿಸಿದ್ದ ಜೈಪುರ್ ಬಯಾನಾ ಎಕ್ಸ್ ಪ್ರೆಸ್ ರೈಲಿನ ಪ್ರಯಾಣಿಕರು ಮೃತಪಟ್ಟವರಾಗಿದ್ದಾರೆ. ರಕ್ಷಾ ಬಂಧನ ಹಬ್ಬದ  ನಿಮಿತ್ತ ತಮ್ಮ ತಮ್ಮ ಊರುಗಳಿಗೆ ತೆರಳಲು ಜನ ಮುಗಿಬಿದ್ದ ಕಾರಣ ರೈಲಿನ ಮೇಲೂ ಕುಳಿತು ಜನ ಪ್ರಯಾಣಿಸುತ್ತಿದ್ದರು. ರೈಲು ಸವಿಮೋಧ್ಪುರ್ ರೈಲ್ವೆ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆಯೇ ಜನ ಇಳಿಯಲು ಮುಂದಾಗಿದ್ದಾರೆ.  ರೈಲಿನಲ್ಲಿ ನೂಕುನುಗ್ಗಲಿದ್ದು, ಪ್ಲಾಟ್ ಫಾರ್ಮ್ ನಲ್ಲಿ ಇಳಿಯುವ ಬದಲು ಕೆಲ ಪ್ರಯಾಣಿಕರು ಇನ್ನೊಂದು ಬಾಗಿಲಿನ ಮೂಲಕ ರೈಲ್ವೆ ಹಳಿಗಳ ಮೇಲೆ ಇಳಿದಿದ್ದಾರೆ. ಇದೇ ಸಂದರ್ಭ ಇನ್ನೊಂದು ಹಳಿಯಲ್ಲಿ ಬರುತ್ತಿದ್ದ ಗಾರ್ಭಾ ಎಕ್ಸ್  ಪ್ರೆಸ್ ಢಿಕ್ಕಿಯಾಗಿ ಐವರು ಮೃತಪಟ್ಟಿದ್ದಾರೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ಕಳುಹಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡವರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ರಕ್ಷಾಬಂಧನ  ಆಚರಣೆಗೆ ಊರಿಗೆ ತೆರಳುವವರು ಹೆಚ್ಚಿದ್ದರಿಂದ ರೈಲಿನಲ್ಲಿ ನೂಕುನುಗ್ಗಲಿತ್ತು. ಮೃತಪಟ್ಟವರು ಹಾಗೂ ಗಾಯಗೊಂಡವರು ಹಬ್ಬ ಆಚರಿಸಲು ಜೈಪುರದಿಂದ ಬರುತ್ತಿದ್ದರು ಎನ್ನಲಾಗಿದೆ. ಆಸ್ಪತ್ರೆಗಳಲ್ಲಿ ದಾಖಲಾಗಿದ್ದವರ ಪೈಕಿ  ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಭೀತಿ ಎದುರಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com