ಜಾರ್ಖಂಡ್: ವ್ಯಕ್ತಿಯೊಬ್ಬರ ನಿವಾಸದ ಕರೆಂಟ್ ಬಿಲ್ ಬರೋಬ್ಬರಿ 38 ಬಿಲಿಯನ್!

ಇಲ್ಲಿನ ನಿವಾಸಿಯೊಬ್ಬರು ತಮ್ಮ ಮನೆಯ ಕರೆಂಟ್ ಬಿಲ್ ನೋಡಿ ಹೌಹಾರಿದ್ದಾರೆ. 3 ಬೆಡ್ ರೂಂ ಮನೆಯ ಬಿಲ್ ಬರೋಬ್ಬರಿ ರು. 38 ಬಿಲಿಯನ್ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಜೆಮ್ ಶೆಡ್ಪುರ: ಇಲ್ಲಿನ ನಿವಾಸಿಯೊಬ್ಬರು ತಮ್ಮ ಮನೆಯ ಕರೆಂಟ್ ಬಿಲ್ ನೋಡಿ ಹೌಹಾರಿದ್ದಾರೆ. 3 ಬೆಡ್ ರೂಂ ಮನೆಯ ಬಿಲ್ ಬರೋಬ್ಬರಿ ರು. 38 ಬಿಲಿಯನ್ ಬಂದಿದೆ.
ಬಿ.ಆರ್. ಗುಹಾ ಎಂಬಾತನಿಗೆ ಜಾರ್ಖಂಡ್ ವಿದ್ಯುತ್ ಮಂಡಳಿಯಿಂದ 38 ಬಿಲಿಯನ್ ಮೊತ್ತದ ಬಿಲ್ ಬಂದಿದೆ. ಅಷ್ಟೇ ಅಲ್ಲ ಕರೆಂಟ್ ಬಿಲ್ ಕಟ್ಟಿಲ್ಲ ಅನ್ನೋ ಕಾರಣಕ್ಕೆ ಆತನ ಮನೆಯ ವಿದ್ಯುತ್ ಸಂಪರ್ಕವನ್ನು ಕೂಡ ಸ್ಥಗಿತಗೊಳಿಸಲಾಗಿದೆ.
ಗುಹಾ ಅವರದ್ದು ಮೂರು ಕೊಠಡಿಗಳ ಪುಟ್ಟ ಮನೆ. ಮೂರು ಫ್ಯಾನ್, ಮೂರು ಟ್ಯೂಬ್ ಲೈಟ್ ಮತ್ತು ಟಿವಿ ಚಾಲನೆಯಲ್ಲಿರುತ್ತದೆ.
ಇಷ್ಟಕ್ಕೆ 38 ಬಿಲಿಯನ್ ಬಿಲ್ ಬರಲು ಹೇಗೆ ಸಾಧ್ಯ ಅನ್ನೋದು ಅವರ ಪ್ರಶ್ನೆಯಾಗಿದೆ. ಗುಹಾಗೆ ಬಿಪಿಯಿದ್ದು  ಆತನ ಪತ್ನಿ ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದಾರೆ.
ಭಾರೀ ಮೊತ್ತದ ಕರೆಂಟ್ ಬಿಲ್ ನೋಡಿ ಇಬ್ಬರೂ ಗಾಬರಿಯಾಗಿದ್ದಾರೆ, ಏನಾದ್ರೂ ಅನಾಹುತವಾದರೇ ಏನು ಗತಿ ಎಂದು ಅವರ ಪುತ್ರಿ ಅಳಲು ತೋಡಿಕೊಂಡಿದ್ದಾರೆ. ನೆರೆಹೊರೆಯವರ ಸಹಾಯದಿಂದ ಈ ಬಗ್ಗೆ ದೂರು ದಾಖಲಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com