ತಕ್ಷಣದಿಂದಲೇ ಬ್ಲೂವೇಲ್ ಗೇಮ್ ಲಿಂಕ್ ತೆಗೆದು ಹಾಕಿ: ಕೇಂದ್ರ ಸರ್ಕಾರದ ಆದೇಶ

ಮಹತ್ವದ ಬೆಳವಣಿಗೆಯಲ್ಲಿ ಮಕ್ಕಳ ಸರಣಿ ಆತ್ಮಹತ್ಯೆಯ ಬಳಿಕ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ಬ್ಲೂ ವೇಲ್‌ ಚ್ಯಾಲೆಂಜ್‌ ಆನ್‌ಲೈನ್‌ ಗೇಮ್ ನ ಲಿಂಕ್ ಅನ್ನು ಇಂಟರ್ ನೆಟ್ ನಿಂದ ತೆಗುದು ಹಾಕುವಂತೆ ಆದೇಶ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಮಕ್ಕಳ ಸರಣಿ ಆತ್ಮಹತ್ಯೆಯ ಬಳಿಕ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ಬ್ಲೂ ವೇಲ್‌ ಚ್ಯಾಲೆಂಜ್‌ ಆನ್‌ಲೈನ್‌ ಗೇಮ್ ನ ಲಿಂಕ್ ಅನ್ನು ಇಂಟರ್  ನೆಟ್ ನಿಂದ ತೆಗುದು ಹಾಕುವಂತೆ ಆದೇಶ ನೀಡಿದೆ.

ಈ ಬಗ್ಗೆ ಕೇಂದ್ರ ಸರ್ಕಾರ ಇಂಟರ್‌ ನೆಟ್‌ ದಿಗ್ಗಜ ಸಂಸ್ಥೆಗಳಾಗಿರುವ ಗೂಗಲ್‌, ಫೇಸ್‌ ಬುಕ್‌, ವಾಟ್ಸಪ್‌, ಇನ್‌ ಸ್ಟಾಗ್ರಾಂ, ಮೈಕ್ರೋ ಸಾಫ್ಟ್ ಮತ್ತು ಯಾಹೂ ಸಂಸ್ಥೆಗಳಿಗೆ ಸೂಚನೆ ನೀಡಿದ್ದು, ಬ್ಲೂ ವೇಲ್‌ ಚ್ಯಾಲೆಂಜ್‌ ಲಿಂಕ್ ಅನ್ನು  ತೆಗೆದು ಹಾಕುವಂತೆ ಸೂಚಿಸಿದೆ. ಮೂಲಗಳ ಪ್ರಕಾರ ಕಳೆದ ಆಗಸ್ಟ್‌ 11ರಂದೇ ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್‌ ಮತ್ತು ಐಟಿ ಸಚಿವಾಲಯ ಪ್ರಮುಖ ಸಾಮಾಜಿಕ ಜಾಲ ತಾಣಗಳ ನಿರ್ವಾಹಕರಲ್ಲಿ ಈ ಬಗ್ಗೆ ಕೇಳಿಕೊಂಡಿದ್ದು,  ಕಾನೂನು ಮತ್ತು ಐಟಿ ಸಚಿವ ರವಿ ಶಂಕರ್‌ ಪ್ರಸಾದ್‌ ಅವರ ಸೂಚನೆಯ ಮೇರೆಗೆ ಎಲ್ಲ ಆನ್‌ ಲೈನ್‌ ಸಂಸ್ಥೆಗಳಿಗೆ ಈ ಬಗ್ಗೆ ಪತ್ರ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

ರಾಜಧಾನಿ ದೆಹಲಿ, ವಾಣಿಜ್ಯ ರಾಜಧಾನಿ ಮುಂಬೈ ಸೇರಿದಂತೆ ದೇಶಾದ್ಯಂತ ಹಲವು ರಾಜ್ಯಗಳಲ್ಲಿ ಈ ಆನ್ ಲೈನ್ ಗೇಮ್ ನಿಂದಾಗಿ ಹಲವು ಮಕ್ಕಳು ಬಲಿಯಾಗಿದ್ದರು. 50 ದಿನಗಳ ಆಟವಾಗಿರುವ ಈ ಬ್ಲೂವೇಲ್ ನಲ್ಲಿ  ದಿನಕ್ಕೊಂದು ಟಾಸ್ಕ್ ನಂತೆ ಪ್ರತೀ ನಿತ್ಯ ವಿವಿಧ ಟಾಸ್ಕ್ ಗಳನ್ನು ನೀಡಲಾಗುತ್ತದೆ. ಪ್ರತೀ ಟಾಸ್ಕ್ ಪೂರ್ಣ ಮಾಡಿದ ಬಳಿಕ ಆಟವಾಡುವ ಪ್ಲೇಯರ್ ತನ್ನ ಟಾಸ್ಕ್ ಗೆ ಸಂಬಂಧಿಸಿದ ಫೋಟೋಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ.  ಅಂತಿಮ ಟಾಸ್ಕ್ ಆಗಿ ಆತ್ಮಹತ್ಯೆ ಮಾಡಿಕೊಳ್ಳುವ ಟಾಸ್ಕ್ ನೀಡಲಾಗುತ್ತದೆ.

ಈ ಮಾರಣಾಂತಿಕ ಬ್ಲೂವೇಲ್ ಗೇಮ್ ನಿಂದಾಗಿ ವಿಶ್ವಾದ್ಯಂತ ಈ ವರೆಗೂ ಸಾವಿರಾರು ಮಕ್ಕಳು ಬಲಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com