ಭಾಷಣದ ವೇಳೆ ಮೋದಿಯವರು ಚಕ್ರಧಾರಿಯಿಂದ ಚರಕಧಾರಿಯವರೆಗಿನ ದೇಶದ ಪ್ರಯಾಣವನ್ನು ಪ್ರಸ್ತಾಪ ಮಾಡಿದ್ದರು. ಭಾಷಣದಲ್ಲಿ ಆಧುನಿಕ ಯುಗದವರೆಗಿನ ಸ್ಫೂರ್ತಿದಾಯಕ ಮೌಲ್ಯಗಳನ್ನು ಚಿತ್ರಣಗೊಂಡಿದ್ದವು.ನಾವು ಶಾಶ್ವತ ರಾಷ್ಟ್ರದಲ್ಲಿದ್ದೇವೆಂಬುದನ್ನು ಇದು ಸ್ಪಷ್ಟಪಡಿಸುತ್ತದೆ. ಪ್ರಧಾನಿ ಮೋದಿಯವರು ಉತ್ತರ ಆಡಳಿತಕ್ಕೆ ಮಂತ್ರಗಳನ್ನು ಹೇಳಿಕೊಂಡಿದ್ದಾರೆ. ಒಬ್ಬ ಸಹೋದ್ಯೋಗಿಯಾಗಿ ಮೋದಿಯವರ ಭಾಷಣ ಹಾಗೂ ಹೇಳಿಕೆಯನ್ನು ಪ್ರಶಂಸಿಸಬೇಕೆಂದು ಎನಿಸುತ್ತಿದೆ. ಭಾಷಣದ ಪ್ರತೀಯೊಂದು ಹೇಳಿಕೆಯೂ ಪ್ರಮುಖವಾಗಿತ್ತು.
ಕಾಶ್ಮೀರ ಕುರಿತಂತೆ ಪ್ರಧಾನಿ ಮೋದಿಯವರು ನೀಡಿದ್ದ ಹೇಳಿಕೆ ಹೃದಯಸ್ಪರ್ಶಿಯಾಗಿತ್ತು. ಸಾಮಾನ್ಯ ಕಾಶ್ಮೀರಿಗನೂ ಶಾಂತಿ ಪ್ರಕ್ರಿಯೆಯಲ್ಲಿ ಭಾಗಿಯಾಗಬೇಕೆಂದು ಸರ್ಕಾರ ಬಯಸುತ್ತದೆ. ಕಾಶ್ಮೀರದಲ್ಲಿ ಶಾಂತಿಗೆ ಧಕ್ಕೆಯುಂಟು ಮಾಡಲು ಯತ್ನಿಸುತ್ತಿರುವ ಕೆಲ ಸಮಾಜಘಾತುಕ ಶಕ್ತಿಗಳಿಗೆ ಕಾಶ್ಮೀರಿಗರು ಬಲಿಪಶುಗಳಾಗುತ್ತಿದ್ದಾರೆಂದು ತಿಳಿಸಿದ್ದಾರೆ.
71ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಹಿನ್ನಲೆಯಲ್ಲಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಮಂತ್ರಿ ಮೋದಿಯವರು, ಗುಂಡುಗಳಾಗಲೀ ಅಥವಾ ಬೈಗುಗಳಿಂದಾಗಲೀ ಕಾಶ್ಮೀರ ಸಮಸ್ಯೆ ಬಗೆಹರಿಯುವುದಿಲ್ಲ. ಕೇವಲ ಪ್ರೀತಿಯಿಂದ ಮಾತ್ರ ಬಿಕ್ಕಟ್ಟು ಬಗೆಹರಿಯಲು ಸಾಧ್ಯ. ಕಾಶ್ಮೀರ ಸಮಸ್ಯೆಗೆ ಬಗೆಹರಿಸಲು ಬಂದೂಕುಗಳು ಬೇಕಿಲ್ಲ, ಪರಸ್ಪರ ಅಪ್ಪುಗೆಯೇ ಸಾಕು ಎಂದು ಹೇಳಿದ್ದರು.