ದೀರ್ಘಕಾಲದ ಸಂಗಾತಿ ಡೆಸ್ಮಾಂಡ್ ಕುಟಿನೋ ಜೊತೆ ಇರೋಮ್‌ ಶರ್ಮಿಳಾ ವಿವಾಹ

ಣಿಪುರದ ಮಾನವ ಹಕ್ಕುಗಳ ಹೋರಾಟಗಾರ್ತಿ ಇರೋಮ್‌ ಚಾನು ಶರ್ಮಿಳಾ (44) ಬಹುಕಾಲದ ಸಂಗಾತಿ ಡೆಸ್ಮಾಂಡ್ ಕುಟಿನ್ಹೊ ಅವರೊಂದಿಗೆ ಗುರುವಾರ ...
ದೀರ್ಘಕಾಲದ ಸಂಗಾತಿ ದೇಸ್ಮಂಡ್ ಕುಟಿನೋ ಜೊತೆ ಇರೋಮ್‌  ಶರ್ಮಿಳಾ ವಿವಾಹ
ದೀರ್ಘಕಾಲದ ಸಂಗಾತಿ ದೇಸ್ಮಂಡ್ ಕುಟಿನೋ ಜೊತೆ ಇರೋಮ್‌ ಶರ್ಮಿಳಾ ವಿವಾಹ
ಕೊಡೈಕೆನಾಲ್: ಮಣಿಪುರದ ಮಾನವ ಹಕ್ಕುಗಳ ಹೋರಾಟಗಾರ್ತಿ ಇರೋಮ್‌ ಚಾನು ಶರ್ಮಿಳಾ (44)  ಬಹುಕಾಲದ ಸಂಗಾತಿ  ಡೆಸ್ಮಾಂಡ್ ಕುಟಿನ್ಹೊ ಅವರೊಂದಿಗೆ ಗುರುವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಬ್ರಿಟಿಷ್‌ ನಾಗರಿಕರಾದ ಕುಟಿನ್ಹೊ  ಜತೆಗೆ ಇರೋಮ್‌ ಶರ್ಮಿಳಾ  ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಸಾಂಸಾರಿಕ ಜೀವನಕ್ಕೆ ಕಾಲಿರಿಸಿದ್ದಾರೆ.
ಉಪ–ನೋಂದಣಾಧಿಕಾರಿ ರಾಧಾಕೃಷ್ಣನ್‌ ಅವರ ಸಮ್ಮುಖದಲ್ಲಿ ಕುಟಿನ್ಹೊ ಶರ್ಮಿಳಾ ಅವರಿಗೆ ಉಂಗುರ ತೊಡಿಸಿದರು. ಇದೊಂದು ಸರಳ ಕಾರ್ಯಕ್ರಮವಾಗಿತ್ತು.
ಹಿಂದೂ ವಿವಾಹ ಕಾಯ್ದೆ ಅಡಿ ಮದುವೆ ನೆರವೇರಿದ್ದರೂ, ಅಂತರ್‌ ಧರ್ಮೀಯ ವಿವಾಹವಾಗಿರುವ ಕಾರಣದಿಂದ ಉಪ–ನೋಂದಣಾಧಿಕಾರಿಗಳು ವಿಶೇಷ ವಿವಾಹ ಕಾಯ್ದೆ ಅಡಿಯಲ್ಲಿ ನೋಂದಣಿ ಮಾಡಿದ್ದಾರೆ.
ಕೊಡೈಕೆನಲ್‌ ಪ್ರಶಾಂತ ಸ್ಥಳವಾಗಿದ್ದು, ಶಾಂತಿಗಾಗಿ ನಡೆಯುತ್ತಿದ್ದ ನನ್ನ ಹುಡುಕಾಟ ಕೊನೆಯಾಗಿದೆ ಎಂದು ಇರೋಮ್‌ ಶರ್ಮಿಳಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com