16 ಕೆ.ಜಿ ಚಿನ್ನ ಹೊಂದಿದ್ದ ವಿಮಾನ ನಿಲ್ದಾಣ ನೌಕರನ ಬಂಧನ

4.6 ಕೋಟಿ ರೂಪಾಯಿ ಮೌಲ್ಯದ 16 ಕೆಜಿ ಚಿನ್ನವನ್ನು ಹೊಂದಿದ್ದ ಚೆನ್ನೈನ ವಿಮಾನ ನಿಲ್ದಾಣದ ನೌಕರನನ್ನು ಸೀಮಾ ಸುಂಕದ ಅಧಿಕಾರಿಗಳು ಬಂಧಿಸಿದ್ದಾರೆ.
16 ಕೆ.ಜಿ ಚಿನ್ನ ಹೊಂದಿದ್ದ ವಿಮಾನ ನಿಲ್ದಾಣ ನೌಕರನ ಬಂಧನ
16 ಕೆ.ಜಿ ಚಿನ್ನ ಹೊಂದಿದ್ದ ವಿಮಾನ ನಿಲ್ದಾಣ ನೌಕರನ ಬಂಧನ
ಚೆನ್ನೈ: 4.6 ಕೋಟಿ ರೂಪಾಯಿ ಮೌಲ್ಯದ 16  ಕೆಜಿ ಚಿನ್ನವನ್ನು ಹೊಂದಿದ್ದ ಚೆನ್ನೈನ ವಿಮಾನ ನಿಲ್ದಾಣದ ನೌಕರನನ್ನು ಸೀಮಾ ಸುಂಕದ ಅಧಿಕಾರಿಗಳು ಬಂಧಿಸಿದ್ದಾರೆ. 
ಸಿಂಗಪೂರ್ ನಿಂದ ವಿಮಾನದಲ್ಲಿ ಬಂದಿದ್ದ ಏರ್ ಲೈನ್ ಕಾಂಟ್ರಾಕ್ಟರ್ ನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದ್ದು, ಬಂಧಿತ ವ್ಯಕ್ತಿಯನ್ನು ಜೆ ಕುಮರ್(31) ಎಂದು ಗುರುತಿಸಲಾಗಿದೆ. ವಶಕ್ಕೆ ಪಡೆಯಲಾಗಿರುವ ವ್ಯಕ್ತಿ ಮೂರು ಬ್ಯಾಗ್ ಗಳನ್ನು ಡೊಮೆಸ್ಟಿಕ್ ಟರ್ಮಿನಲ್ ಗೆ ವರ್ಗಾವಣೆ ಮಾಡಲು ಯತ್ನಿಸುತ್ತಿದ್ದ ಎಂದು ತನಿಖಾಧಿಕಾರಿ ಹೇಳಿದ್ದಾರೆ. 
ಕಳೆದ 15 ದಿನಗಳಲ್ಲಿ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿರುವ ಎರಡನೇ ಪ್ರಕರಣ ಇದಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com