ಸೌದಿಯಲ್ಲಿ ಕೆಲಸ ಮಾಡುತ್ತಿರುವ ವಲಸಿಗ ಭಾರತೀಯರಿಗೆ ಸೌದಿ ಸರ್ಕಾರದ ನಿರ್ಧಾರದಿಂದ ಹೊಡೆತ ಬೀಳಲಿದ್ದು, ಉದ್ಯೋಗಾವಕಾಶದ ಕೊರತೆ ಎದುರಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. ಸೆಪ್ಟೆಂಬರ್ ತಿಂಗಳಿನಿಂದ ಪರಿಷ್ಕೃತ ಯೋಜನೆ ಜಾರಿಗೆ ಬರಲಿದ್ದು, ಹೆಚ್ಚಿನ ಉದ್ಯೋಗಗಳಿಂದ ಭಾರತೀಯರು ವಂಚಿತರಾಗುವ ಸಾಧ್ಯತೆ ಇದೆ.