'ಲಡಾಖ್ ಗಡಿಯಲ್ಲಿ ರಸ್ತೆ ನಿರ್ಮಿಸುವ ದುಸ್ಸಾಹಸ ಮಾಡದಿರಿ': ಭಾರತಕ್ಕೆ ಚೀನಾ ಎಚ್ಚರಿಕೆ

ಇತ್ತೀಚೆಗೆ ಲಡಾಖ್ ನಲ್ಲಿ ಭಾರತ ಮತ್ತು ಚೀನಾ ಸೈನಿಕರು ಕೈಕೈ ಮಿಲಾಯಿಸಿದ್ದ ಬೆನ್ನಲ್ಲೇ, ಲಡಾಖ್ ನ ಪಾಂಗೊಂಗ್ ಸರೋವರದ ಸಮೀಪ ಭಾರತ 20 ಕಿ.ಮೀ ಉದ್ದದ ರಸ್ತೆ ನಿರ್ಮಿಸುತ್ತಿರುವುದಕ್ಕೆ ಚೀನಾ ಆಕ್ಷೇಪ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೀಜಿಂಗ್: ಇತ್ತೀಚೆಗೆ ಲಡಾಖ್ ನಲ್ಲಿ ಭಾರತ ಮತ್ತು ಚೀನಾ ಸೈನಿಕರು ಕೈಕೈ ಮಿಲಾಯಿಸಿದ್ದ ಬೆನ್ನಲ್ಲೇ, ಲಡಾಖ್ ನ ಪಾಂಗೊಂಗ್ ಸರೋವರದ ಸಮೀಪ ಭಾರತ 20 ಕಿ.ಮೀ ಉದ್ದದ ರಸ್ತೆ ನಿರ್ಮಿಸುತ್ತಿರುವುದಕ್ಕೆ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ. 

ಲಡಾಖ್ ಗಡಿಯಲ್ಲಿ ಭಾರತ ರಸ್ತೆ ನಿರ್ಮಾಣ ಮಾಡುತ್ತಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಚೀನಾದ ವಿದೇಶಾಂಗ ವಕ್ತಾರ ಹುವಾ ಚುನೈಯಿಂಗ್ ಅವರು, ಚೀನಾದ ಅಭಿವೃದ್ಧಿ ಕಾರ್ಯಕ್ಕೆ ಭಾರತ ಅಡ್ಡಿಪಡಿಸುತ್ತಿದೆ. ಆದರೆ, ಭಾರತದ ಗಡಿಯ ಸಮೀಪ ರಸ್ತೆ ನಿರ್ಮಾಣ ಮಾಡುತ್ತಿದೆ. ಇದರಿಂದ ಭಾರತದ ಮಾತು ಕೃತಿ ಬೇರೆ ಬೇರೆ ಎನ್ನುವುದು ಸಾಬೀತಾಗಿದೆ ಎಂದು ಹೇಳಿದ್ದಾರೆ. 

ಬಹಿರಂಗವಾಗಿ ಶಾಂತಿ ಬಯಸುತ್ತೇವೆಂದು ಹೇಳುತ್ತಿರುವ ಭಾರತ, ಮತ್ತೊಂದೆಡೆ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದೆ. ಭಾರತಕ್ಕೆ ಶಾಂತಿ ಬೇಕಿದ್ದರೆ ಗಡಿಯಲ್ಲಿ ರಸ್ತೆ ನಿರ್ಮಾಣ ಕಾರ್ಯ ಕೈಬಿಡುವುಡು ಒಳ್ಳೆಯದು. ಒಂದು ವೇಳೆ ಲಡಾಖ್ ಗಡಿಯಲ್ಲಿ ಭಾರತ ತನ್ನ ಕಾರ್ಯವನ್ನು ಮುಂದುವರೆಸಿದ್ದೇ ಆದರೆ, ಇದು ಡೋಕ್ಲಾಮ್ ಬಿಕ್ಕಟ್ಟನ್ನು ಮತ್ತಷ್ಟು ಬಿಗಡಾಯಿಸುತ್ತದೆ. ಲಡಾಖ್ ಬಳಿ ರಸ್ತೆ ನಿರ್ಮಾಣ ಮಾಡುವ ಮೂಲಕ ಭಾರತ ತನ್ನ ಕಪಾಳಕ್ಕೆ ತಾನೇ ಹೊಡೆದುಕೊಳ್ಳುತ್ತಿದೆ ಎಂದು ತಿಳಿಸಿದ್ದಾರೆ. 

ಇದೇ ವೇಲೆ ಡೋಕ್ಲಾಮ್ ವಿವಾದ ಸಂಬಂಧ ಮಾತನಾಡಿರುವ ಅವರು, ಗಡಿಯಲ್ಲಿ ಶಾಂತಿ ಕಾಪಾಡುವ ಕುರಿತಂತೆ ಉಭಯ ರಾಷ್ಟ್ರಗಳು ಒಪ್ಪಂಂದ ಮಾಡಿಕೊಂಡಿತ್ತು. ಭಾರತ ಕೂಡಲೇ ಗಡಿಯಿಂದ ಬೇಷರತ್ತಾಗಿ ತನ್ನ ಸೇನೆಯನ್ನು ಹಿಂಪಡೆದುಕೊಳ್ಳಬೇಕೆಂದು ಹೇಳಿದ್ದಾರೆ. 

ಕಳೆದ ಮೂರು ತಿಂಗಳಿನಿಂದ ಭಾರತ–ಚೀನಾ ಗಡಿಯ ಸಿಕ್ಕಿಂ ವಲಯದಲ್ಲಿ ಸಂಘರ್ಷ ನಡೆಯುತ್ತಿದ್ದು, ಗಡಿ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿದ ಚೀನೀ ಸೈನಿಕರು ಅಲ್ಲಿ ಇದ್ದ ಭಾರತೀಯ ಬಂಕರ್ ಗಳನ್ನು ನಾಶ ಮಾಡಿದ್ದರು.  ಇದೇ ಕಾರಣಕ್ಕೆ ಗಡಿ ಗಸ್ತು ನಡೆಸುವ ಯೋಧರಿಗೆ ಬೆಂಬಲವಾಗಿ ಇನ್ನಷ್ಟು ಸೈನಿಕರನ್ನು ಕಳುಹಿಸಲಾಗಿತ್ತು. ಯುದ್ಧ ಮಾಡುವ ಉದ್ದೇಶಕ್ಕೆ ಅಲ್ಲ ಎಂದು ಭಾರತ ಸ್ಪಷ್ಟಪಡಿಸಿತ್ತು. ಜೂನ್‌ 16 ಘಟನೆ ಬಳಿಕ ಇಂಡೋ-ಚೀನಾ ಗಡಿ ಪ್ರಕ್ಷುಬ್ದಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com