ತೆರೆದ ಮ್ಯಾನ್ ಹೋಲ್ ಗೆ ಬಿದ್ದ ವೃದ್ದ ಮಹಿಳೆ: 12 ಗಂಟೆಯ ನಂತರ ರಕ್ಷಣೆ

ತೆರೆದ ಮ್ಯಾನ್ ಹೋಲ್ ಗೆ ಬಿದ್ದ 82 ವರ್ಷದ ವೃದ್ಧ ಮಹಿಳೆಯನ್ನು 12 ಗಂಟೆಗಳ ನಂತರ ರಕ್ಷಿಸಲಾಗಿದೆ. ಮ್ಯಾನ್ ಹೋಲ್ ಗೆ ಬಿದ್ದ ಮಹಿಳೆ ರಾತ್ರಿ ಪೂರ್ತಿ ...
ಮ್ಯಾನ್ ಹೋಲ್ ಗೆ ಬಿದ್ದಿದ್ದ ಮಹಿಳೆಯ ರಕ್ಷಣೆ
ಮ್ಯಾನ್ ಹೋಲ್ ಗೆ ಬಿದ್ದಿದ್ದ ಮಹಿಳೆಯ ರಕ್ಷಣೆ
ಭುವನೇಶ್ವರ: ತೆರೆದ ಮ್ಯಾನ್ ಹೋಲ್ ಗೆ ಬಿದ್ದ 82 ವರ್ಷದ ವೃದ್ಧ ಮಹಿಳೆಯನ್ನು 12 ಗಂಟೆಗಳ ನಂತರ ರಕ್ಷಿಸಲಾಗಿದೆ. ಮ್ಯಾನ್ ಹೋಲ್ ಗೆ ಬಿದ್ದ ಮಹಿಳೆ ರಾತ್ರಿ ಪೂರ್ತಿ ರಕ್ಷಿಸುವವರೆಗೂ ಅಲ್ಲಿಯೇ ಕಾಲ ಕಳೆದಿದ್ದಾರೆ.
ಒಡಿಸಾ ನೀರು ಸರಬರಾಜು ಮಂಡಳಿ ತೆರೆದು ಬಿಟ್ಟಿದ್ದ  20 ಅಡಿ ಉದ್ದದ ಮ್ಯಾನ್ ಹೋಲ್ ನಲ್ಲಿ ತಮ್ಮ ಮಗನ ಮನೆಗೆ ತೆರಳುತ್ತಿದ್ದ ವೇಳೆ  ದೂಖಿ ಜೇತಿ ಬಿದ್ದಿದ್ದಾರೆ.  ತಲೆಗೆ ಪೆಟ್ಟು ಬಿದ್ದಿದ್ದರೂ ಆಕೆ ಪ್ರಜ್ಞೆ ತಪ್ಪಿದೇ ಇಡೀ ರಾತ್ರಿ ಎಚ್ಚರವಾಗಿದ್ದರು. ಆಕೆಯ ಅಳು ಬೆಳಗಿನ ಜಾವ ಆ ದಾರಿಯಲ್ಲಿ ಹೋಗತ್ತಿದ್ದವರ ಗಮನ ಸೆಳೆದಿದೆ.
ಕೂಡಲೇ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಳಗ್ಗೆ 8 ಗಂಟೆ ವೇಳೆಗೆ ಆಕೆಯನ್ನು ರಕ್ಷಿಸಿದ್ದಾರೆ, ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಆಕೆ ಆರೋಗ್ಯವಾಗಿದ್ದಾರೆ ಎಂದು ಹೇಳಲಾಗಿದೆ.
ವೃದ್ದ ಮಹಿಳೆ ನಡೆದು ಕೊಂಡು ಹೋಗುತ್ತಿರುವಾಗ ತೆರೆದ ಮ್ಯಾನ್ ಹೋಲ್ ಗೆ ಬಿದ್ದಿರುವ ವಿಡಿಯೋ ರಸ್ತೆ ಪಕ್ಕದಲ್ಲಿದ್ದ ಸ್ಥಳೀಯರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com